ಬೆಂಗಳೂರು: ನಗರದಲ್ಲಿ ₹10 ಕೋಟಿ ಮೌಲ್ಯದ ಮದ್ದನ್ನು ಸಿಸಿಬಿ ನಾರ್ಕೋಟಿಕ್ ವಿಭಾಗದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಾಗಲೂರು ಪ್ರದೇಶದಲ್ಲಿರುವ Prestige Finsbury Park ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ದಾಳಿ ನಡೆಸಿ ದೊಡ್ಡ ಪ್ರಮಾಣದ ಡ್ರಗ್ಸ್ ಪತ್ತೆಹಚ್ಚಲಾಗಿದೆ.
ಕಾರ್ಯಾಚರಣೆಯಲ್ಲಿ 8,335 ಎಲ್ಎಸ್ಡಿ (LSD) ಸ್ಕ್ರಿಪ್ಸ್ಗಳನ್ನು ಜಪ್ತಿ ಮಾಡಲಾಗಿದೆ. ಪ್ರತಿ ಎಲ್ಎಸ್ಡಿ ಸ್ಕ್ರಿಪ್ ಬೆಲೆ ಸುಮಾರು ₹6,000 ಆಗಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಎಲ್ಎಸ್ಡಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇವರ ಚಿತ್ರ ಸೇರಿದಂತೆ ವಿವಿಧ ಚಿತ್ರಕಲಾ ರೂಪಗಳಲ್ಲಿ ಎಲ್ಎಸ್ಡಿ ಸ್ಕ್ರಿಪ್ಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಇದೇ ವೇಳೆ 534 ಗ್ರಾಂ ಚರಸ್ ಹಾಗೂ 5 ಕೆಜಿ ಹೈಡ್ರೋ ಗಾಂಜಾ ಕೂಡ ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಅಶ್ವಿನ್ (27) ಮತ್ತು ಮೊಬಿನ್ (25) ಅವರನ್ನು ಬಂಧಿಸಲಾಗಿದೆ. ಇಬ್ಬರೂ ಡ್ರಗ್ ಪೆಡ್ಲಿಂಗ್ ಅನ್ನು ವೃತ್ತಿಯನ್ನಾಗಿ ಮಾಡಿಕೊಂಡಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಫ್ಲಾಟ್ ಮಾಲೀಕರ ಪಾತ್ರದ ಬಗ್ಗೆ ಕೂಡ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ತನಿಖೆ ಮುಂದುವರಿದಿದೆ.
