ದಿನನಿತ್ಯ ಕಾಡುವ ಚಿಕ್ಕಪುಟ್ಟ ಸಮಸ್ಯೆಗಳಿಗೆ ಹತ್ತಾರು ರೀತಿ ಮಾತ್ರೆ ತಿಂದು ಇನ್ನಷ್ಟು ಅನಾರೋಗ್ಯ ಬರಿಸಿಕೊಳ್ಳುವ ಬದಲು ಈ ಎಲೆಯನ್ನು ತಿಂದು ನೋಡಿ…
ದೊಡ್ಡ ಪತ್ರೆ, ಸಾಂಬರ್ ಸೊಪ್ಪು, ಸಾಸಂಬರ್ ಸೊಪ್ಪು, ಸಾವಿರ ಸೊಪ್ಪು ಎಂದೆಲ್ಲಾ ಕರೆಸಿಕೊಳ್ಳುವ ಈ ಪುಟ್ಟ ಎಲೆಯಿಂದ ಅದ್ಭುತ ಆರೋಗ್ಯ ಪ್ರಯೋಜನಗಳಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಈ ಅದ್ಭುತ ಔಷಧಿಯ ಸಸ್ಯಗಳನ್ನು ಬೆಳೆಯುವುದು ಮಾಮೂಲು. ದೊಡ್ಡ ಪತ್ರೆಯ ಚಟ್ನಿ, ತಂಬುಳಿ, ಸಾಸಿವೆ… ಹೀಗೆ ಹಲವಾರು ಅಡುಗೆಗಳನ್ನು ಮಾಡಿ ಆಗಾಗ್ಗೆ ಇದನ್ನು ಅನ್ನದ ಜೊತೆ ಬಳಸುತ್ತಾರೆ.
ಆದರೆ ಬೆಂಗಳೂರಿನಂಥ (Bangalore) ಪ್ರದೇಶಗಳಲ್ಲಿ ಹಲವರ ಮನೆಯ ಕುಂಡಗಳಲ್ಲಿ ಇದು ಅಲಂಕರಿಸುತ್ತದೆ. ಆದರೆ ಇದರ ಪ್ರಯೋಜನ ಮಾತ್ರ ತಿಳಿದಿರುವುದು ಕೆಲವೇ ಜನರಿಗೆ. ಚಿಕ್ಕದೊಂದು ಟೊಂಗೆ ನೆಟ್ಟರೂ ಕೆಲವೇ ದಿನಗಳಲ್ಲಿ ವಿಸ್ತರಿಸಿ ನೋಡಲು ಚೆಂದ ಕಾಣುವ ಕಾರಣದಿಂದ ಹಲವರು ಇದನ್ನು ಕುಂಡದಲ್ಲಿ ಬೆಳೆಯುವುದುಂಟು. ಆದರೆ ಇದರ ಆರೋಗ್ಯ ಪ್ರಯೋಜನಗಳು ಗೊತ್ತಿರುವುದಿಲ್ಲ.
ಸಿಕ್ಕಾಪಟ್ಟೆ ಸೀನು ಇದ್ದರೆ ದೊಡ್ಡಪತ್ರೆಯೇ ಮದ್ದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ದೊಡ್ಡಪತ್ರೆ ಎಲೆಯನ್ನು ತಿಂದು ನಸುಬೆಚ್ಚಗಿನ ನೀರನ್ನು ಕುಡಿದರೆ, ಒಂದೇ ತಿಂಗಳಿನಲ್ಲಿ ಸೀನು ಸಂಪೂರ್ಣ ನಿಲ್ಲುತ್ತದೆ.
ಇದನ್ನು ಹಿಂಡಿದಾಗ ರಸ ಬರುತ್ತದೆ. ಇಲ್ಲದೇ ಹೋದರೆ ಗ್ಯಾಸ್ ಮೇಲೆ ಎಲೆಯನ್ನು ತುಸು ಬೆಚ್ಚಗೆ ಮಾಡಿ ಹಿಂಡಿದರೂ ರಸ ಬರುತ್ತದೆ. ಆ ರಸವನ್ನು ಕುಡಿಯುತ್ತಾ ಬಂದರೆ, ಕೆಮ್ಮು, ಶೀತ , ಸ್ಕಿನ್ ಅಲರ್ಜಿ, ಕ್ರಿಮಿ ಕಡಿದಿದ್ದರೆ ಎಲ್ಲವೂ ಮಾಯವಾಗುತ್ತದೆ.
ಬಾಣಲೆಯಲ್ಲಿ ಎಲೆಯನ್ನು ಬಿಸಿ ಮಾಡಿ ನೆತ್ತಿಗೆ ಹೆಚ್ಚುವುದರಿಂದಲೂ ನೆಗಡಿ, ಕೆಮ್ಮು ಕಡಿಮೆ ಆಗುತ್ತದೆ. ಒಂದು ಟೊಂಗೆ ಗಿಡವನ್ನು ಮನೆಯಲ್ಲಿ ನೆಟ್ಟರೆ 10 ಟೈಪ್ ಮಾತ್ರೆಯನ್ನು (Medicines) ಹೊರಕ್ಕೆ ಹಾಕಬಹುದು ಎನ್ನುತ್ತಾರೆ ಆಯುರ್ವೇದ ತಜ್ಞರು.
ಮಾತ್ರವಲ್ಲದೇ ದೊಡ್ಡಪತ್ರೆಯಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ದೊಡ್ಡಪತ್ರೆಯು ಶೀತ, ಕೆಮ್ಮು, ಮತ್ತು ಉಸಿರಾಟದ ತೊಂದರೆಗಳಿಗೆ ಪರಿಣಾಮಕಾರಿಯಾಗಿದೆ. ಇದನ್ನು ಕಷಾಯ, ಅಥವಾ ಚಟ್ನಿ ಮಾಡಿ ಸೇವಿಸಬಹುದು.
ದೊಡ್ಡಪತ್ರೆ ಎಲೆಗಳು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಮತ್ತು ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉರಿತವನ್ನು ಶಮನಗೊಳಿಸುತ್ತದೆ. ದೊಡ್ಡಪತ್ರೆಯನ್ನು ಚರ್ಮದ ತುರಿಕೆ, ಕಜ್ಜಿ ಮತ್ತು ಬೆವರುಸಾಲೆಗಳಿಗೆ ಹಚ್ಚಬಹುದು. ಇದು ಉರಿಯೂತದ ಗುಣಗಳನ್ನು ಹೊಂದಿದ್ದು, ಚರ್ಮದ ಕೆಂಪು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಕೀಟಗಳು ಕಚ್ಚಿದಾಗ ಉಂಟಾಗುವ ಊತ ಮತ್ತು ನೋವನ್ನು ಶಮನ ಮಾಡಲು ದೊಡ್ಡಪತ್ರೆ ರಸವನ್ನು ಹಚ್ಚಬಹುದು.
