ಮೊನ್ನೆಯೊಬ್ಬರು “ದೊಡ್ಡವರು” ಸ್ವಯಂ ಘೋಷಿತ “ಗುರೂಜಿ”ಗಳು ಮತ್ತು “ಪಂಡಿತ”ರು ಅವರ ಹೆಸರು ಬೇಡ …ಪಂಡಿತ So from su ಇಟ್ಕೋಳ್ಳಿ…. ಫೋನ್ ಮಾಡಿದ್ದರುˌ ಅವರು ತಾವು ಪ್ರಖಂಡಾ ಪಂಡಿತರುˌ ನಾಲ್ಕು ವೇದಗಳನ್ನು ಓದಿರುವೆˌ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕ್ರತ ಪಾಠ ಮಾಡಿರುವೆˌ ಎಷ್ಟೊಂದು ಯಜ್ಞ ಹವನ ಮಾಡಿಸಿರುವೆ… ಯಾವ್ಯಾವ ಟಿವಿ ಯಲ್ಲಿ ಬಂದಿರುವೆ… ಯಾವ ಪುಸ್ತಕಗಳನ್ನು ದಬ್ಬಾಕಿರುವೆ…ನನ್ನದು ಫೆಮಸ್ ಯುಟ್ಯೂಬ್ ಚಾನೆಲ್ ಇದೆ… ಹೀಗೆ ಅರ್ಧ ಗಂಟೆ ಕೊರೆಯುತ್ತಲೆ ಇದ್ದರು… ನಾನು ಹ್ಹು ಮೇಶಿನ್ ಆನ್ ಮಾಡಿಕೊಂಡು ಕುಳಿತ್ತಿದೆ. ಅವರು ಮಾತ ಮಾತಿಗೂ ನನಗೆ ಅದು ಗೊತ್ತು ಇದೂ ಗೊತ್ತು… ನಿಮಗೆ ಅದು ಗೊತ್ತಿಲ್ಲವಾ? ಇದೂ ಗೊತ್ತಿಲ್ಲವಾ? ಎಂದು ತಿವಿಯುತ್ತಲೆ ಇದ್ದರು. ಅವರಲ್ಲಿ ಶಾಣ್ಯತನವಿದೆ. ಆ ಶಾಣ್ಯತನ ಅವರನ್ನು ಮುಕ್ತಗೊಳ್ಳಿಸಬೇಕಾಗಿತ್ತು. ಅದೇ ಅವರ ಅಹಂಕಾರವಾಗಿದೆ…ಅಹಂ ಇನ್ನಷ್ಟು ಗಟ್ಟಿಗೊಳ್ಳಿಸಿದೆ. ಆ ಶ್ಯಾಣತನವೇ ಅವರನ್ನು ಹಿಡಿದುಕೊಂಡಿದೆˌ ಬಂಧಿಸಿದೆ. ನಾನು ಸುಮ್ನೆ ಕೇಳುತ್ತಲೆ ಇದೆ. ಕಡೆಗೆ ಕೇಳಿದೆ “ನಾನು” ಯಾರು ಎಂದು ಗೊತ್ತೇ? ಹೋಗಲಿ ಬಿಡಿ. ಇಷ್ಟೇಲ್ಲಾ ಓದು ಪಾಂಡಿತ್ಯ ಇರುವುದು ಯಾವುದಕ್ಕೆ “ನಾನು” ಯಾರು? ಎಂದು ತಿಳಿಯಲು ಅಷ್ಟೆ ಸರ್ . ಅದು ತಿಳಿದ ಮೇಲೆ ಯಾವ ವೇದˌ ಓದುˌ ಉಪನಿಷತ್ ˌ ಗೀತೆˌ ಬೈಬಲ್…ಯಾವುದು ಉಪಯೋಗವಿಲ್ಲ. ಮತ್ತು “ನಾನು” ಯಾರು? ಎಂದು ತಿಳಿಯಲು ಈ ಯಾವ ಉದ್ರಿ ಜ್ಞಾನದ ಅವಶ್ಯಕತೆಯು ಇಲ್ಲಾ.
ಇಬ್ಬರು ಪ್ರಖಂಡ ಪಂಡಿತರು ನದಿ ದಾಟಲು ದೋಣಿಯೊಂದರಲ್ಲಿ ಪಯಣಿಸುತ್ತಿದ್ದರು. ಇಬ್ಬರು ಸೇರಿ ದೋಣಿಯವನಿಗೆ ಇದೇ ರೀತಿ ಪ್ರಶ್ನೆಗಳನ್ನು ಕೇಳಿದರುˌ ಅದಕ್ಕೆ ದೋಣಿಯವನು ನನಗೆ ದೋಣಿ ನಡೆಸುವುದು ಬಿಟ್ಟು ಬೇರೆಯೇನು ಗೊತ್ತಿಲ್ಲಾ ಎನ್ನುತ್ತಿದ್ದ. ಅಷ್ಟರಲ್ಲಿ ನದಿ ಮಧ್ಯ ಪ್ರವಾಹ ಉಕ್ಕಿ ಬರತೊಡಗಿತ್ತು… ಆಗ ದೋಣಿಯವನು ಆ ಪಂಡಿತರಿಗೆ ಕೇಳಿದˌ “ಪಂಡಿತರೆˌ ನಿಮಗೆ ಈಜು ಬರುತ್ತಾ”
ಅವರು ” ಇಲ್ಲಾ ಬರುವುದಿಲ್ಲ” ಈಗ ದೋಣಿ ಮುಳುಗುಲಿದೆˌ ನನಗೆ ಈಜು ಬರುತ್ತೆ ನಾನು ಈಜಬಲ್ಲೆ. ನೀವಿನ್ನು ಮುಣ್ಣುಗುವುದು ಗ್ಯಾರೆಂಟಿ. ಪಂಡಿತರು ತಮ್ಮ ಪುಸ್ತಕಗಳ ಭಂಡಾರವನ್ನು ಹೊತ್ತುಕೊಂಡು ಈಜಲಾಗದೆ ಮುಳುಗಿ ಹೋದ್ರು…
ಪಾಂಡಿತ್ಯವೆಂದು ಬದುಕಿಗೆ ಸಂಬಂಧಿಸಿದಲ್ಲ. ನೀವು ಪಾಂಡಿತ್ಯದೊಂದಿಗೆˌ ಬುದ್ದಿಯೊಂದಿಗೆ ಆಟವಾಡುತ್ತಿದ್ದರೆ ಆಡಿˌ ಬದುಕು ನಿಮ್ಮನ್ನು ಒಂದು ದಿನಾ ಮುಣ್ಣುಗಿಸುವುದು. ಅದರಿಂದ ಸತ್ಯ ದರ್ಶನವಾಗದು.
ಸರಳವಾಗಿ ಸಹಜವಾಗಿ ಬದುಕುವುದಕ್ಕೆ ಯಾವ ಪಾಂಡಿತ್ಯವು ಬೇಕಾಗಿಲ್ಲ..! ಸಾಮಾನ್ಯ ಜ್ಞಾನ ಮತ್ತು ಜೀವಾನುಭವ ಇರಬೇಕಷ್ಟೆ.!
✍️*ಜಯದೇವ ಪೂಜಾರ*
7676870233
