ಬೆಂಗಳೂರು : ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಇದೇ ಮೇ 25ಕ್ಕೆ ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಚುನಾವಣಾ ಆಯೋಗ ಸಿದ್ಧತೆ ನಡೆಸಿದ್ದು, ಸುಸೂತ್ರ ಮತದಾನಕ್ಕೆ ತಯಾರಿ ನಡೆಸಿದೆ.
31 ಜಿಲ್ಲೆಯ, 135 ತಾಲೂಕಿನ, 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ
ಮೇ 25ರಂದು ಮತದಾನ ನಡೆಯಲಿದ್ದು, ಮೇ 28ರಂದು ರಿಸಲ್ಟ್ ಹೊರಬೀಳಲಿದೆ.
ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ನಡೆಯಲಿದೆ. ಮತ ಎಣಿಕೆ 28/5/2025ರ ಬುಧವಾರ ನಡೆಯಲಿದೆ.
ಗ್ರಾಮ ಪಂಚಾಯಿತಿಗಳ ಉಪ ಚುನಾವಣೆಯಲ್ಲಿ NOTA ಮತ ಚಲಾವಣೆ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
