ಸ್ವಿಜರ್ಲೆಂಡ್ನ ಸಂಶೋಧಕರು ಕಂಪ್ಯೂಟರ್ಗಳ ಕಾರ್ಯನಿರ್ವಹಣೆ ಮತ್ತು ನಿರ್ಮಾಣದಲ್ಲಿ ಜೀವಂತ ನರಕೋಶಗಳನ್ನು ಬಳಸುವ ವಿನೂತನ ಪ್ರಯೋಗವನ್ನು ಕೈಗೆತ್ತಿಕೊಂಡಿದ್ದಾರೆ. ಸಾಮಾನ್ಯವಾಗಿ ಕಂಪ್ಯೂಟರ್ಗಳು ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಹೊಂದಿದ್ದರೆ, ಫೈನಲ್ಸ್ಪಾರ್ಕ್ ಪ್ರಯೋಗಾಲಯದ ಸಹ ಸಂಸ್ಥಾಪಕ ಡಾ. ಫ್ರೆಡ್ ಜೋರ್ಡಾನ್ ತಮ್ಮ ಈ ಹೊಸ ಕಂಪ್ಯೂಟರ್ ಘಟಕಕ್ಕೆ ‘ವೆಟ್ವೇರ್’ ಎಂಬ ಹೆಸರು ನೀಡಿದ್ದಾರೆ.
ಇದನ್ನು ಓದಿ: ಕರ್ನಾಟಕ ಗೃಹ ಮಂಡಳಿ’ಗೆ 2760 ಎಕರೆ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ — ರೈತರಿಂದ ಭಾರಿ ವಿರೋಧ
ಪ್ರಯೋಗದಲ್ಲಿ, ಮಾನವರ ನರಕೋಶಗಳಿಂದ ಕೋಶಗಳನ್ನು ದಾನಿಗಳಿಂದ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಮೊದಲಿಗೆ ನ್ಯೂರಾನ್ಗಳಾಗಿ (ನರಕೋಶ) ಅಭಿವೃದ್ಧಿಪಡಿಸಲಾಗುತ್ತದೆ. ನಂತರ ಈ ನ್ಯೂರಾನ್ಗಳಿಂದ ಆರ್ಗಾನಾಯ್ಡ್ (ಕೋಶಗಳ ಸಮೂಹ) ರಚಿಸಿ ಪೆಟ್ರಿಪ್ಲೇಟ್ಗಳ ಮೇಲೆ ಸ್ಥಾಪಿಸಲಾಗುತ್ತದೆ, ಇದರಿಂದ ಜೀವಂತ ಕೋಶಗಳಿಂದ ಕಾರ್ಯನಿರ್ವಹಿಸುವ ಕಂಪ್ಯೂಟರ್ ತಂತ್ರಜ್ಞಾನಕ್ಕೆ ಮಾರ್ಗ ತೋರುತ್ತದೆ.

[…] […]