ದುಬೈ (ಸೆ.21) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಪಂದ್ಯ ಸ್ಲೆಡ್ಜಿಂಗ್ಗೆ ವೇದಿಕೆಯಾಗಿದೆ. ಭಾರತ ಬ್ಯಾಟಿಂಗ್ ವೇಳೆ ಅಭಿಷೇಕ್ ಶರ್ಮಾ ಹಾಗೂ ಪಾಕಿಸ್ತಾನದ ಹ್ಯಾರಿಸ್ ರೌಫ್ ವಾಗ್ವಾದ ನಡೆಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ ಬ್ಯಾಟಿಂಗ್ ವೇಳೆ ಶಾಹೀಬ್ಜಾದ್ ಫರ್ಹಾನ್ ಸಂಭ್ರಮಾಚರಣೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಪೆಹಲ್ಗಾಂನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಬಲಿಯಾದ 26 ಮಂದಿ, ಅವರ ಕುಟುಂಬ ಹಾಗೂ ಸಮಸ್ತ ಭಾರತೀಯರನ್ನು ಅಣಕಿಸಿದ್ರಾ ಅನ್ನೋ ಅನುಮಾನಗಳು ಕಾಡತೊಡಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.
ಶಾಹೀಬ್ಜಾದ್ ಫರ್ಹಾನ್ ಹಾಫ್ ಸೆಂಚುರಿ ಸಂಭ್ರಮ ವಿವಾದ
ಭಾರತ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಹೀಬ್ಜಾದ್ ಫರ್ಹಾನ್ ಉತ್ತಮ ಆರಂಭ ನೀಡಿದ್ದರು. ಅಬ್ಬರಿಸಿದ ಶಾಹೀಬ್ಜಾದ್ ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹಾಫ್ ಸೆಂಚುರಿ ಸಂಭ್ರಮವನ್ನು ಶಾಹೀಬ್ಜಾದ್ ಫರ್ಹಾನ್, ಭಾರತೀಯ ತಂಡದ ಡೌಗ್ಕಡೆ ಬ್ಯಾಟ್ ತೋರಿಸಿ ಗನ್ ಫೈರಿಂಗ್ ರೀತಿ ಸಂಭ್ರಮಿಸಿದ್ದಾರೆ. ಬ್ಯಾಟನ್ನೇ ಏಕೆ 47 ಗನ್ ರೀತಿ ತೋರಿಸಿ, ಫೈರಿಂಗ್ ಮಾಡಿದ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
