ಹಾಸನ, ಮೇ 05: ಸಕಲೇಶಪುರ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಇಂದು ಬೆಳಿಗ್ಗೆ ಕಾಡೆಮ್ಮೆ ದಾಳಿಗೆ ರೈತ ತಿಮ್ಮಪ್ಪ (60) ಸಾವನ್ನಪ್ಪಿರುವ ಘಟನೆ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ತಿಮ್ಮಪ್ಪ ಅವರು ತಮ್ಮ ಜಮೀನಿನ ಕಡೆಗೆ ತೆರಳುತ್ತಿದ್ದ ವೇಳೆ ಕಾಡೆಮ್ಮೆ ಏಕಾಏಕಿ ದಾಳಿ ಮಾಡಿದೆ. ಕಾಡೆಮ್ಮೆ ಗುದ್ದಿದ ಪರಿಣಾಮ ತಿಮ್ಮಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಕುಪಿತರಾದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಿಮ್ಮಪ್ಪ ಅವರ ಶವವನ್ನು ಮೇಲೆತ್ತಲು ಬಿಡದೆ ಪ್ರತಿಭಟನೆ ನಡೆಸಿದ್ದಾರೆ.

[…] ಸಕಲೇಶಪುರ-ಕಾಡೆಮ್ಮೆ ದಾಳಿಗೆ ರೈತ ಬಲಿ […]