ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೊಂದರೆ ರಹಿತ ಪ್ರಯಾಣಕ್ಕೆ FASTag ಆಧಾರಿತ ವಾರ್ಷಿಕ ಪಾಸ್

ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಹಾಗೂ ಸುಲಭ ಪ್ರಯಾಣಕ್ಕೆ ₹3,000 ಬೆಲೆಯ FASTag ಆಧಾರಿತ ವಾರ್ಷಿಕ ಪಾಸ್ ಪರಿಚಯಿಸಲು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಆಗಸ್ಟ್ 15ರಿಂದ ಜಾರಿಗೆ ಬರುವ ಈ ಪಾಸ್ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಮಾನ್ಯವಾಗಿದ್ದು, ಕಾರು, ಜೀಪ್, ವ್ಯಾನ್‌ಗಳಿಗೆ ಮಾತ್ರ ಅನ್ವಯವಾಗಲಿದೆ. ಈ ಹೊಸ ವ್ಯವಸ್ಥೆ ಪ್ರಯಾಣಿಕರಿಗೆ ಸಮಯ ಹಾಗೂ ಹಣ ಉಳಿತಾಯದ ಜೊತೆಗೆ ಸುಗಮ ಪ್ರಯಾಣ ಅನುಭವ ನೀಡಲಿದೆ.