ಕರ್ನಾಟಕದಲ್ಲಿ ಫೈರ್ ಸೇಫ್ಟಿ ಮಾನದಂಡ ಪೂರೈಸಿದ ಆಸ್ಪತ್ರೆಗಳು ಅಲ್ಪ: ಆರೋಗ್ಯ ಸಚಿವರ ಶಾಕಿಂಗ್ ಮಾಹಿತಿ

ಕರ್ನಾಟಕದ 2,878 ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 14 ಹಾಗೂ 5,850 ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ 315 ಮಾತ್ರ ಫೈರ್ ಸೇಫ್ಟಿ ಪರ್ಮಿಷನ್ ಮಾನದಂಡಗಳನ್ನು ಪೂರೈಸಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದರು.