ಛತ್ತೀಸ್‌ಗಢದಲ್ಲಿ ಮೊದಲ ಅಖಿಲ ಭಾರತ ಡಿಜಿಪಿ-ಐಜಿಪಿ ಸಮ್ಮೇಳನ

ಛತ್ತೀಸ್‌ಗಢದಲ್ಲಿ ನವೆಂಬರ್ 28–30 ರಂದು ಮೊದಲ ಬಾರಿಗೆ ಅಖಿಲ ಭಾರತ ಡಿಜಿಪಿ-ಐಜಿಪಿ ಸಮ್ಮೇಳನ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿ, ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನದಲ್ಲಿ ನಕ್ಸಲಿಸಂ, ಭಯೋತ್ಪಾದನೆ, ಮಾದಕ ದ್ರವ್ಯ ನಿಗ್ರಹ, ಸೈಬರ್ ಭದ್ರತೆ ಮತ್ತು ಗಡಿ ನಿರ್ವಹಣೆ ಕುರಿತ ಚರ್ಚೆಗಳು ನಡೆಯಲಿವೆ.