ಟಿ.ನರಸೀಪುರ: ಸುಪ್ರಸಿದ್ಧ ಮೂಗೂರು ತ್ರಿಪುರಸುಂದರಿ ಅಮ್ಮನವರ ಜಾತ್ರೆಯಲ್ಲಿ ಬ್ಯಾಡರಹಳ್ಳಿ ಗ್ರಾಮಸ್ಥರು ಜಾತ್ರೆಗೆ ಬರುವ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿಗೆ ಕಳೆದ ಐದು ದಿನಗಳು ಬೆಳಗಿನ ತಿಂಡಿ,ಮಧ್ಯಾಹ್ನ ಹಾಗೂ ರಾತ್ರಿ ಸಿಹಿ ಊಟ ನೀಡುವ ಮೂಲಕ ಭಕ್ತಾದಿಗಳ ಹಸಿವನ್ನು ನೀಗಿಸಿದರು.
ಮಾಜಿ ಸಚಿವರು ಹಾಗೂ ಸಂಸದರಾಗಿದ್ದ ಸಿ.ಎಸ್.ಪುಟ್ಟರಾಜುರವರ ಸಹಕಾರದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲು ಸಾಧ್ಯವಾಗಿದೆ ಎಂದು ಗ್ರಾಮಸ್ಥರು ಸ್ಮರಿಸಿದರು.
ಇದನ್ನು ಓದು:ಟಿ.ನರಸೀಪುರ ಭಕ್ತಿಭಾವದಿಂದ ನೆರವೇರಿದ ಮೂಗೂರು ತ್ರಿಪುರಸುಂದರಿ ಜಾತ್ರೆ
ತ್ರಿಪುರ ಸುಂದರಿ ಅಮ್ಮನವರು ಬೇಡಿದ್ದೆಲ್ಲವನ್ನೂ ಕರುಣಿಸುತ್ತಿದ್ದಾಳೆ.ಅವಳ ಸೇವೆಯನ್ನು ನಮ್ಮ ಗ್ರಾಮಸ್ಥರು ಎಲ್ಲರೂ ಸೇರಿ ಅನ್ನ ಸಂತರ್ಪಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆಂದಿದ್ದಾರೆ.

ಪ್ರತಿವರ್ಷವೂ ಅಮ್ಮನವರ ಸೇವೆಯಲ್ಲಿ ಯುವ ಸಮೂಹ ನಾ…ಮುಂದು,ತಾ…ಮುಂದು ಎನ್ನುವ ರೀತಿಯಲ್ಲಿ ಹಗಲಿರುಳು ಸೇವೆ ಸಲ್ಲಿಸಿದ್ದು ತಾಯಿ ಕರುನಾಡಿನ ಎಲ್ಲರನ್ನೂ ಕಾಪಾಡಲಿ ಎಂದರು.
- ಎಂ.ನಾಗೇಂದ್ರಕುಮಾರ್

[…] […]