ಜೂನ್ 24, 2025: ಪ್ರಮುಖ ಆಟೋಮೋಟಿವ್ ಪ್ಲೇಯರ್ ಮತ್ತು ಭಾರತದ ಅತಿದೊಡ್ಡ ವ್ಯಾನ್ ತಯಾರಕ ಸಂಸ್ಥೆಯಾದ ಫೋರ್ಸ್ ಮೋಟಾರ್ಸ್ ಲಿಮಿಟೆಡ್, ತನ್ನ ಗ್ರಾಹಕರ ಅನುಭವ ಮತ್ತು ಡೀಲರ್ ನಿರ್ವಹಣಾ ವ್ಯವಸ್ಥೆಗಳನ್ನು ಅಪ್ಗ್ರೇಡ್ ಮಾಡಲು ಜೊಹೊ ಕಾರ್ಪೊರೇಷನ್ನೊಂದಿಗೆ ಮಹತ್ವದ ಪಾಲುದಾರಿಕೆಯನ್ನು ಮಾಡಿಕೊಂಡಿರುವುದಾಗಿ ಪ್ರಕಟಿಸಿದೆ.
ಮೌಲ್ಯ ಸರಪಳಿಯಾದ್ಯಂತ ವರ್ಗ-ಪ್ರಮುಖ ತಂತ್ರಜ್ಞಾನಗಳ ಮೂಲಕ ನಾವೀನ್ಯತೆ, ಉತ್ಪಾದಕತೆಯನ್ನು ಸುಧಾರಿಸುವುದು ಮತ್ತು ಗ್ರಾಹಕರ ತೃಪ್ತಿಯನ್ನು ಹೆಚ್ಚಿಸುವುದು. ಈ ಗುರಿಯನ್ನು ಹೊಂದಿರುವ ಫೋರ್ಸ್ ಮೋಟಾರ್ಸ್ನ ಡಿಜಿಟಲ್ ರೂಪಾಂತರ ಕಾರ್ಯಕ್ರಮವಾದ ಪ್ರಾಜೆಕ್ಟ್ ಡಿಜಿಫೋರ್ಸ್ ಗೆ ಈ ಸಹಯೋಗ ಒಂದು ಪ್ರಮುಖ ಮೈಲಿಗಲ್ಲಾಗಲಿದೆ.
ಈ ಉಪಕ್ರಮದ ಭಾಗವಾಗಿ, ಜೊಹೊದ ಅಡ್ವಾನ್ಸ್ಡ್ ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜ್ಮೆಂಟ್ (ಸಿ.ಆರ್.ಎಂ.) ಮತ್ತು ಡೀಲರ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಡಿಎಂಎಸ್), ಜೊತೆಗೆ 12 ಎಐ-ಚಾಲಿತ ಫ್ರಂಟ್-ಆಫೀಸ್ ಅಪ್ಲಿಕೇಶನ್ಗಳ ಒಂದು ಗುಚ್ಛವನ್ನು ಫೋರ್ಸ್ ಮೋಟಾರ್ಸ್ನ ರಾಷ್ಟ್ರವ್ಯಾಪಿ ನೆಟ್ವರ್ಕ್ನಲ್ಲಿ ನಿಯೋಜಿಸಲಾಗುವುದು. ಈ ಸಂಯೋಜಿತ, ಕ್ಲೌಡ್-ಆಧಾರಿತ ಪರಿಹಾರ ಹಿಂದಿನಿಂದಲೂ ಬಂದಿರುವ ಹಳೆಯ ವ್ಯವಸ್ಥೆಗಳನ್ನು ಬದಲಾಯಿಸುತ್ತದೆ.
ಮಾರ್ಕೆಟಿಂಗ್, ಮಾರಾಟ, ಸೇವೆ, ಗ್ರಾಹಕರನ್ನು ತೊಡಗಿಸಿಕೊಳ್ಳುವುದು ಮತ್ತು ಆಂತರಿಕ ಸಹಯೋಗವನ್ನು ಆಧುನೀಕರಿಸಲು ಬೇಕಾದ ಅತ್ಯಾಧುನಿಕ ಸಾಮರ್ಥ್ಯಗಳನ್ನು ನೀಡುತ್ತದೆ. ಡೀಲರ್ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಮತ್ತು ತಂಡಗಳು, ಡೀಲರ್ಗಳು ಮತ್ತು ಗ್ರಾಹಕರಿಗೆ ಒಂದು ಸಂಘಟಿತ ವೇದಿಕೆಯನ್ನು ಸೃಷ್ಟಿಸುವ ಮೂಲಕ ಈ ಹೊಸ ಪರಿಹಾರ ಕೆಲಸಗಳ ಪ್ರತಿಯೊಂದು ಹಂತದಲ್ಲೂ ಗ್ರಾಹಕರ ಅನುಭವವನ್ನು ಸಮಗ್ರವಾಗಿ ಉತ್ತಮಗೊಳಿಸಲಿದೆ.
ಫೋರ್ಸ್ ಮೋಟಾರ್ಸ್ ಭಾರತದಾದ್ಯಂತ 200+ ಡೀಲರ್ಶಿಪ್ಗಳು, 70 ಅಧಿಕೃತ ಸೇವಾ ಕೇಂದ್ರಗಳು ಮತ್ತು 30 ಬಿಡಿಭಾಗಗಳ ಕೇಂದ್ರಗಳ ವಿಶಾಲ ಜಾಲವನ್ನು ಹೊಂದಿದೆ. 25+ ದೇಶಗಳಲ್ಲಿ ಅಂತಾರಾಷ್ಟ್ರೀಯ ವಿತರಕರು ಇದಕ್ಕೆ ನೆರವಾಗುತ್ತಿದ್ದಾರೆ. ಈ ಡೀಲರ್ ಮತ್ತು ವಿತರಕ ಪಾಲುದಾರರು ಮಾರಾಟ ಮತ್ತು ಸೇವಾ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ, ಪ್ರತಿ ಸಂಪರ್ಕ ಬಿಂದುವಿನಲ್ಲಿ ಗ್ರಾಹಕರ ತೃಪ್ತಿಯನ್ನು ಸುಧಾರಿಸುವ ಮೂಲಕ ಮತ್ತು ಹೆಚ್ಚು ವೃತ್ತಿಪರ, ಡೇಟಾ-ಚಾಲಿತ ವ್ಯವಹಾರ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮೂಲಕ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಈ ಹೊಸ ಸಿ.ಆರ್.ಎಂ-ಡಿಎಂಎಸ್ ಪರಿಹಾರ ಅನುವು ಮಾಡಿಕೊಡುತ್ತದೆ.

ಈ ಪಾಲುದಾರಿಕೆಯ ಮಹತ್ವದ ಕುರಿತು ಮಾತನಾಡಿ, ಫೋರ್ಸ್ ಮೋಟಾರ್ಸ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಸನ್ ಫಿರೋಡಿಯಾ, “ಪ್ರಾಜೆಕ್ಟ್ ಡಿಜಿಫೋರ್ಸ್ ಮತ್ತು ಜೊಹೊ ಜೊತೆಗಿನ ನಮ್ಮ ಪಾಲುದಾರಿಕೆಯ ಗುರಿ ಗ್ರಾಹಕರಿಗೆ ಇನ್ನಷ್ಟು ವಿಶಿಷ್ಟವಾದ ಅನುಭವವನ್ನು ನೀಡುವುದು. ಜೊಹೊದ ತಂತ್ರಜ್ಞಾನ ಪರಿಹಾರಗಳು ಭಾರತದಲ್ಲಿ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ನಮ್ಮ ಡೀಲರ್ಗಳು ಮತ್ತು ವಿತರಣಾ ಪಾಲುದಾರರ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ. ಭಾರತದಲ್ಲಿ ನೆಲೆಯೂರಿರುವ ಜಾಗತಿಕ ತಂತ್ರಜ್ಞಾನ ನಾಯಕ ಜೊಹೊ ಜೊತೆಗಿನ ನಮ್ಮ ಸಹಯೋಗದ ಗುರಿ ಮತ್ತು ಭಾರತದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಪ್ರತಿಪಾದಿಸುವ ಫೋರ್ಸ್ ಮೋಟಾರ್ಸ್ನ ಬದ್ಧತೆ ಎರಡೂ ಪರಸ್ಪರ ಸಂಪೂರ್ಣವಾಗಿ ಹೊಂದಿಕೆಯಾಗುತ್ತವೆ.”ಎಂದರು.
ಜೊಹೊದ ಸಿಇಒ ಮಣಿ ವೆಂಬು, “ಫೋರ್ಸ್ ಮೋಟಾರ್ಸ್, ಬಹಳ ಹಿಂದಿನಿಂದಲೂ ದೇಶೀಯ ಇಂಜಿನಿಯರಿಂಗ್ ಶ್ರೇಷ್ಠತೆಯ ಸಂಕೇತವಾಗಿದ್ದು ಬಲವಾದ ರಾಷ್ಟ್ರವ್ಯಾಪಿ ಡೀಲರ್ ನೆಟ್ವರ್ಕ್ ಮತ್ತು ಬೆಳೆಯುತ್ತಿರುವ ಜಾಗತಿಕ ಹೆಜ್ಜೆಗುರುತನ್ನು ಹೊಂದಿದೆ. ಪ್ರಾಜೆಕ್ಟ್ ಡಿಜಿಫೋರ್ಸ್ನೊಂದಿಗೆ ಅವರ ಈ ಪರಂಪರೆಯನ್ನು ಅತ್ಯಾಧುನಿಕವಾಗಿ ಡಿಜಿಟಲೀಕರಿಸುತ್ತಿದ್ದಾರೆ. ಆವಿಷ್ಕಾರ ಮತ್ತು ಖರೀದಿಯಿಂದ ಸೇವೆ, ಬೆಂಬಲ ಮತ್ತು ಮಾಲೀಕತ್ವದವರೆಗೆ ಸಮಗ್ರವಾಗಿ ಗ್ರಾಹಕರನ್ನು ತೊಡಗಿಸಿಕೊಳ್ಳುವಂತೆ ಪರಿವರ್ತಿಸುತ್ತಿದ್ದಾರೆ.
ಈ ಪಾಲುದಾರಿಕೆಯಿಂದ ಗ್ರಾಹಕರು ಪಡೆಯುವ ಉತ್ತಮ ಅನುಭವಗಳು ಬೆಳವಣಿಗೆಯ ಚಾಲಕಶಕ್ತಿಯಾಗಿ ಕೆಲಸ ಮಾಡುತ್ತವೆ. ಇದು, ಹಂಚಿಕೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಒಟ್ಟಾರೆ, ತಂತ್ರಜ್ಞಾನದಿಂದ ಕಾರ್ಯಾಚರಣೆಗಳು ಸರಳಗೊಳ್ಳುತ್ತವೆ, ಸಹಯೋಗ ಬಲಗೊಳ್ಳುತ್ತದೆ ಮತ್ತು ಪ್ರತಿಯೊಂದು ಸಂಪರ್ಕ ಬಿಂದುವಿನಲ್ಲಿ ಸಂದರ್ಭೋಚಿತವಾಗಿ ಇಂಟೆಲಿಜೆನ್ಸನ್ನು ಬಳಸಿಕೊಳ್ಳುತ್ತದೆ”.
“ಫೋರ್ಸ್ ಮೋಟಾರ್ಸ್ ಅವರ ಡಿಜಿಟಲೀಕರಣದ ಪ್ರಯಾಣದಲ್ಲಿ ಪಾಲುದಾರರಾಗಿರುವುದು ನಮಗೆ ರೋಮಾಂಚನಕಾರಿ. ಜೊಹೊ ವೇದಿಕೆಯಿಂದ ಮಾಡ್ಯುಲಾರಿಟಿ, ವರ್ಟಿಕಲ್ ಆಳ ಮತ್ತು ಚುರುಕುತನ ಬರುತ್ತದೆ. ಫೋರ್ಸ್ ಮೋಟಾರ್ಸ್ ತನ್ನ ಮುಂದಿನ ಹಂತದ ಬೆಳವಣಿಗೆಗೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ನಮಗೆ ಈ ಸಹಯೋಗ ಬಹಳ ಉಪಯುಕ್ತವಾಗಿದೆ ಎಂಬುದನ್ನು ಗೌರವದಿಂದ ಸ್ಮರಿಸುತ್ತೇವೆ”.
ಈ ಮಹತ್ವದ ಉಪಕ್ರಮವು ಅಸಾಧಾರಣ ಗ್ರಾಹಕ ಅನುಭವಗಳನ್ನು ನೀಡುವ ವಿಷಯದಲ್ಲಿ ಫೋರ್ಸ್ ಮೋಟಾರ್ಸ್ಗೆ ಇರುವ ಬದ್ಧತೆಯನ್ನು ಬಲಪಡಿಸುತ್ತದೆ ಮತ್ತು ಬೆಳವಣಿಗೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ತನ್ನ ಡೀಲರ್ ನೆಟ್ವರ್ಕನ್ನು ಭವಿಷ್ಯಕ್ಕೆ ಸಿದ್ಧವಾಗಿರುವಂತೆ ಸಜ್ಜುಗೊಳಿಸುತ್ತದೆ. ಈ ಸಹಯೋಗದೊಂದಿಗೆ ಫೋರ್ಸ್ ಮೋಟಾರ್ಸ್, ತನ್ನ ಡಿಜಿಟಲೀಕರಣ ಪ್ರಯಾಣದಲ್ಲಿ ಒಂದು ಮಹತ್ವದ ಹೆಜ್ಜೆಯನ್ನು ಮುಂದಿಡುತ್ತಿದೆ; ಭಾರತೀಯ ಆಟೋಮೋಟಿವ್ ವಲಯದಲ್ಲಿ ತಂತ್ರಜ್ಞಾನ ಅಳವಡಿಕೆಗೆ ಹೊಸ ಮಾನದಂಡವನ್ನು ಸ್ಥಾಪಿಸುತ್ತಿದೆ.
For more inquiries, please contact
Monika Kolgaonkar
Associate Director
monika.kolgaonkar@mslgroup.com
