
ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು
ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಮಾತಿನ ಸಮರ
ಸಂಡೂರು : ರಾಜ್ಯ ಬಿಜೆಪಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ನಡುವೆ ಮಾತಿನ ಸಮರ, ರಾಮುಲು ಬಿಜೆಪಿ ರಾಜ್ಯ ಉಸ್ತುವಾರಿ ಮತ್ತು ರಾಜ್ಯ ಪಕ್ಷದ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಹೈಕಮಾಂಡ್ ಮಧ್ಯಪ್ರವೇಶಿಸಿದ್ದು, ರಾಮುಲು ಅವರಿಗೆ ಕೂಡಲೇ ದೆಹಲಿಗೆ ಬರುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರೆ ಮಾಡಿ ಮಾತನಾಡಿದ್ದಾರೆ
ಸಂಡೂರು ಸೋಲಿಗೆ ಶ್ರೀರಾಮುಲು ಕಾರಣ, ನಾನೇ ರಾಮುಲು ಮಂತ್ರಿಯಾಗಲು ಕಾರಣ ಎಂಬ ಜನಾರ್ದನ ರೆಡ್ಡಿ ಮಾತು, ನಿನ್ನೆ ನಡೆದ ಕೋರ್ ಕಮಿಟಿಯಲ್ಲಿ ರಾಮುಲು ಹೊರ ಹಾಕಿದ್ದ ಅಸಮಾಧಾನದಿಂದ ರಾಜ್ಯ ಬಿಜೆಪಿ ಉದ್ಭವಿಸಿರುವ ಬೆಳವಣಿಗೆಗಳನ್ನು ಸರಿಪಡಿಸಲು ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ.
ಅಲ್ಲದೇ ಪಕ್ಷ ತೊರೆಯುವ ಇಂಗಿತವನ್ನು ವ್ಯಕ್ತಪಡಿಸಿರುವ ರಾಮುಲು ಅವರನ್ನು ಆತುರದ ನಿರ್ಧಾರ ಬೇಡ. ಬನ್ನಿ ಮಾತನಾಡೋಣ ಎಂದು ನಡ್ಡಾ ಹೇಳಿದ್ದಾರೆ.