ಕರ್ನಾಟಕ ಸರ್ಕಾರವು ಬಿ ಖಾತಾಗೆ ಸಂಬಂಧಿಸಿದಂತೆ ಮತ್ತೊಂದು ಬಿಗ್ ಅಪ್ಡೇಟ್ಸ್ ನೀಡಲು ಮುಂದಾಗಿದೆ. ಯಾವುದೇ ಖಾತಾ ಇಲ್ಲದ ಹಾಗೂ ಅನಧಿಕೃತ ಆಸ್ತಿಗಳಿಗೆ ಬಿ ಖಾತಾ ನೀಡುತ್ತಿದೆ. ಆದರೆ, ಬಿ ಖಾತಾ ಎಂದಿಗೂ ಸಮಸ್ಯೆಯೇ ಇದೀಗ ಬಿ ಖಾತಾ ಬದಲಿಗೆ ಎ ಖಾತಾ ನೀಡುವುದಕ್ಕೆ ಸರ್ಕಾರ ಮುಂದಾಗುತ್ತಿದೆ ಎನ್ನುವ ಭರ್ಜರಿ ನ್ಯೂಸ್ ಬಂದಿದೆ.
ಇದು ನಿಜಕ್ಕೂ ಬಿ ಖಾತಾ ಆಸ್ತಿಯನ್ನು ಹೊಂದಿರುವವರಿಗೆ ಗುಡ್ನ್ಯೂಸ್ ಅಂತಲೇ ಹೇಳಬಹುದಾಗಿದೆ. ಯಾಕೆಂದರೆ ಬಿ ಖಾತಾ ಆಸ್ತಿಯನ್ನು ಹೊಂದಿದ್ದರೆ ಅದು ಬಿಸಿ ತುಪ್ಪ ನುಂಗಿದ ಅನುಭವ ಆಗುತ್ತಿತ್ತು. ಇದಕ್ಕೆ ಕಾರಣ ಸರ್ಕಾರದಿಂದ ಈ ನಿರ್ದಿಷ್ಟ ಆಸ್ತಿಗಳಿಗೆ ಪೂರ್ಣ ಪ್ರಮಾಣದ ಮಾನ್ಯತೆ ಇಲ್ಲದೆ ಇರುವುದು. ಇದೀಗ ಇನ್ಮುಂದೆ ಬಿ ಖಾತಾ ಬದಲಿಗೆ ಎ ಖಾತಾ ಸಿಗಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಯಾವ ಬದಲಾವಣೆಯನ್ನು ಮಾಡಲು ಸರ್ಕಾರ ಮುಂದಾಗಿದೆ. ಈಗ ಇರುವ ಅಪ್ಡೇಟ್ಸ್ ಏನು ಅಂತ ನೋಡೋಣ.
ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಸಿಕ್ಕಿರುವ ಸೈಟುಗಳ ವಿಚಾರದಲ್ಲಿ ಮಹತ್ವದ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ಮುಂದಿನ ದಿನಗಳಲ್ಲಿ ಆಸ್ತಿದಾರರಿಗೆ ಬಿ ಖಾತಾ ನೀಡುವುದರ ಬದಲಿಗೆ ಹೆಚ್ಚುವರಿ ಅಭಿವೃದ್ಧಿ ಶುಲ್ಕವನ್ನು ತೆಗೆದುಕೊಂಡು ಒಂದೇ ಬಾರಿಗೆ ಎ ಖಾತಾ ನೀಡುವುದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಲು ಭರ್ಜರಿ ಸಿದ್ಧತೆಗಳು ಶುರುವಾಗಿವೆ. ಇದು ಬೆಂಗಳೂರಿನಲ್ಲಿ ಲಕ್ಷಾಂತರ ಬಿ ಖಾತಾ ಇರುವ ಆಸ್ತಿದಾರರಿಗೆ ಬಂಪರ್ ಸುದ್ದಿ ಅಂತಲೇ ಹೇಳಲಾಗುತ್ತಿದೆ. ಬಿ ಖಾತಾ ಎಂದಿಗೂ ಸಮಸ್ಯೆಯೇ ಆಗಿದೆ. ಶುಲ್ಕವನ್ನು ಪಾವತಿ ಮಾಡಿ ಎ ಖಾತಾವನ್ನು ಪಡೆದುಕೊಳ್ಳುವುದಕ್ಕೆ ಹಲವು ಆಸ್ತಿದಾರರು ಸಿದ್ಧರಿದ್ದಾರೆ. ಈ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ಸಣ್ಣ ಸೈಟ್ಗಳ ಗೈಡೆನ್ಸ್ ವ್ಯಾಲ್ಯೂವಿನ ಶೇ 5 ಹಾಗೂ ಅದಕ್ಕಿಂತ ದೊಡ್ಡ ಸೈಟ್ಗಳಿಂದ ಗೈಡೆನ್ಸ್ ವ್ಯಾಲ್ಯೂವಿನ ಬರೋಬ್ಬರಿ ಶೇ 15 ರಷ್ಟು ಮೊತ್ತದ ಹಣವನ್ನು ಸಂಗ್ರಹಿಸುವ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.
ಇನ್ನು ಕರ್ನಾಟಕದಲ್ಲಿ ಪ್ರತಿ ವರ್ಷ ಸರಾಸರಿ 10,000 ಕಟ್ಟಡ ಯೋಜನೆ ಮಂಜೂರಾತಿ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಈ ಆಸ್ತಿಗಳಲ್ಲಿ 60 ಕ್ಕಿಂತ ಹೆಚ್ಚು ಆಸ್ತಿಗಳು ಬಿ ಖಾತಾ ವ್ಯಾಪ್ತಿಯಲ್ಲಿ ಸೇರಿವೆ. ಅಲ್ಲದೇ ನಗರದ ಹಲವು ಭಾಗಗಳಲ್ಲಿ ಬಿಡಿಎ ಲೇಔಟ್ಗಳ ರಚನೆ ಇನ್ನೂ ಆಗದೆ ಇರುವುದು ಸಹ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಇಲ್ಲಿಯ ವರೆಗೆ ಈ ರೀತಿಯ ಆಸ್ತಿಗಳಿಗೆ ಬಿ ಖಾತಾ ನೀಡಲಾಗುತ್ತಿದೆ. ಆದರೆ ಇನ್ಮುಂದೆ ಆಸ್ತಿ ಪ್ರಮಾಣಪತ್ರ ಕೊಡುವ ಸಂದರ್ಭದಲ್ಲಿಯೇ ಬಿ ಖಾತಾ ಬದಲಾಗಿ ನೇರವಾಗಿ ಎ ಖಾತಾ ನೀಡಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ. ಮೊದಲ ಹಂತದಲ್ಲೇ ಅಭಿವೃದ್ಧಿ ಶುಲ್ಕ ಸಂಗ್ರಹಿಸಿ ಎ ಖಾತಾ ಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. ಒಂದೊಮ್ಮೆ ಈ ಪದ್ಧತಿ ಜಾರಿಯಾದರೆ ಬಿ ಖಾತಾ ಆಸ್ತಿದಾರರಿಗೆ ಬಂಪರ್ ಅಂತಲೇ ಹೇಳಬಹುದಾಗಿದೆ.
