ಹೃದಯಾಘಾತ ತುರ್ತು ವೈದ್ಯಕೀಯ ಸ್ಥಿತಿಯಾಗಿದ್ದು, ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ. ಈ ಪರಿಸ್ಥಿತಿಯಲ್ಲಿ ರೋಗಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸಹಾಯ ಸಿಗದಿದ್ದರೆ ಸಾವಿನ ಅಪಾಯ ಹೆಚ್ಚಾಗಬಹುದು. ಹೃದಯಾಘಾತದ ಸಣ್ಣಪುಟ್ಟ ಲಕ್ಷಣಗಳನ್ನು ಸಹ ನಿರ್ಲಕ್ಷಿಸಬಾರದು ಎಂದು ತಜ್ಞರು ಸಲಹೆ ನೀಡಲು ಇದೇ ಕಾರಣ.
ತಕ್ಷಣದ ವೈದ್ಯಕೀಯ ಸಹಾಯ ಪಡೆಯುವುದರಿಂದ ಹೃದಯಕ್ಕೆ ಆಗುವ ಹಾನಿಯನ್ನು ತಡೆಯಬಹುದು.
ಹೃದಯಾಘಾತದ ಲಕ್ಷಣಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?
ಮೊದಲನೆಯದಾಗಿ, ಹೃದಯಾಘಾತದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇದರ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಎಲ್ಲರಲ್ಲೂ ಹೃದಯಾಘಾತಗ ಹಠಾತ್ ಎದೆ ನೋವಿನಿಂದ ಪ್ರಾರಂಭವಾಗುವುದಿಲ್ಲ ಎಂಬುದನ್ನು ನೆನಪಿಡಿ. ಇದರ ಬಗ್ಗೆ ನೀವು ಹಲವು ಬಾರಿ ಕೇಳಿರಬೇಕು. ಹಾರ್ಟ್ ಅಟ್ಯಾಕ್ ಲಕ್ಷಣಗಳು ಕ್ರಮೇಣ ಸೌಮ್ಯ ನೋವು ಮತ್ತು ಅಸ್ವಸ್ಥತೆಯೊಂದಿಗೆ ಪ್ರಾರಂಭವಾಗಬಹುದು. ವಿಶ್ರಾಂತಿ ಪಡೆಯುತ್ತಿರುವಾಗ ಅಥವಾ ಯಾವುದೇ ಕೆಲಸದಲ್ಲಿ ಸಕ್ರಿಯವಾಗಿರುವಾಗ ಹೃದಯಾಘಾತ ಸಂಭವಿಸಬಹುದಾದ ಸಾಧ್ಯತೆ ಇದೆ.
ಹಾರ್ಟ್ ಅಟ್ಯಾಕ್ ಸಾಮಾನ್ಯ ಲಕ್ಷಣ :
ಹೃದಯಾಘಾತದ ಸಾಮಾನ್ಯ ಲಕ್ಷಣಗಳಲ್ಲಿ ಎದೆಯಲ್ಲಿ ತೀವ್ರವಾದ ನೋವು, ಎದೆ ಮೇಲೆಒತ್ತಡ, ಇದು ಎದೆಯ ಭಾಗದಲ್ಲಿ ಹಿಸುಕುವ ನೋವಿನಂತೆ ಭಾಸವಾಗುತ್ತದೆ. ಇದು ಕೆಲವು ನಿಮಿಷಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಈ ಎದೆ ನೋವು ಒಂದಷ್ಟು ಸಮಯ ಬರುತ್ತದೆ ಮತ್ತೆ ಸ್ವಲ್ಪ ಸಮಯ ಹೋಗುತ್ತದೆ. ಹೀಗೆ ಹೋಗಿ ಬರುವ ಎದೆ ನೋವು ಹೃದಯಾಘಾತದ ಸಂಕೇತ ವಾಗಿರಬಹುದು.
ಎದೆಯನ್ನು ಮೀರಿ ದೇಹದ ಮೇಲ್ಭಾಗದ ಭಾಗಗಳಾದ ತೋಳುಗಳು, ಬೆನ್ನು, ಕುತ್ತಿಗೆ, ಹೊಟ್ಟೆ, ಹಲ್ಲು ಮತ್ತು ದವಡೆಗೆ ಈ ನೋವು ಹರಡುತ್ತದೆ. ರೋಗಿಗಳು ಶೀತ ಬೆವರು, ವಾಕರಿಕೆ ಅಥವಾ ವಾಂತಿ, ತಲೆ ತಿರುಗುವಿಕೆ, ಆತಂಕ, ಅಜೀರ್ಣ, ಆಯಾಸ ಮುಂತಾದ ಲಕ್ಷಣಗಳನ್ನು ಸಹ ಅನುಭವಿಸಬಹುದು. ಪುರುಷರಿಗಿಂತ ಮಹಿಳೆಯರು ಕುತ್ತಿಗೆ, ಭುಜ, ಮೇಲಿನ ಬೆನ್ನು ಅಥವಾ ಹೊಟ್ಟೆಯಲ್ಲಿ ನೋವು ಮುಂತಾದ ಹೆಚ್ಚುವರಿ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು.
ಮೇಯೊ ಕ್ಲಿನಿಕ್ ಪ್ರಕಾರ, ಹೃದಯಾಘಾತವು ಸಾಮಾನ್ಯವಾಗಿ 15 ನಿಮಿಷಗಳಿಗಿಂತ ಹೆಚ್ಚು ಕಾಲ ಎದೆ ನೋವನ್ನು ಉಂಟುಮಾಡುತ್ತದೆ. ಕೆಲವರಿಗೆ ಸೌಮ್ಯವಾದ ಎದೆ ನೋವು ಇದ್ದರೆ, ಇತರರಿಗೆ ಹೆಚ್ಚು ತೀವ್ರವಾದ ನೋವು ಇರುತ್ತದೆ. ಅಸ್ವಸ್ಥತೆ ಸಾಮಾನ್ಯವಾಗಿ ಎದೆಯಲ್ಲಿ ಒತ್ತಡ ಅಥವಾ ಭಾರದೊಂದಿಗೆ ಸಂಬಂಧಿಸಿದೆ, ಆದರೂ ಕೆಲವರಿಗೆ ಎದೆ ನೋವು ಅಥವಾ ಒತ್ತಡವೇ ಇರುವುದಿಲ್ಲ. ಕೆಲವರಿಗೆ ಹಠಾತ್ ಹೃದಯಾಘಾತವಾಗುತ್ತದೆ, ಆದರೆ ಅನೇಕರಿಗೆ ಗಂಟೆಗಳು ಅಥವಾ ದಿನಗಳ ಮೊದಲು ಎಚ್ಚರಿಕೆ ಚಿಹ್ನೆಗಳು ಇರುತ್ತವೆ.
ಹೃದಯಾಘಾತದ ಪ್ರಥಮ ಚಿಕಿತ್ಸೆ :
ಹಾರ್ಟ್ ಅಟ್ಯಾಕ್ ಆದಾಗ ರೋಗಿಗೆ ಪ್ರಥಮ ಚಿಕಿತ್ಸೆ ನೀಡುವುದು ಬಹಳ ಮುಖ್ಯ. ಹೃದಯಾಘಾತದ ಸಮಯದಲ್ಲಿ ಕೆಲವು ಪ್ರಥಮ ಚಿಕಿತ್ಸೆಗಳನ್ನು ವೈದ್ಯರೇ ಸೂಚಿಸಿದ್ದಾರೆ. ಇದರಿಂದ ವ್ಯಕ್ತಿಯ ಜೀವವನ್ನು ಉಳಿಸಬಹುದಾಗಿದೆ. ಹೃದಯಾಘಾತ ಆದ ತಕ್ಷಣ ಈ ಕೆಳಗಿನ ಪ್ರಥಮ ಚಿಕಿತ್ಸೆ ನೀಡಬೇಕು.
>> ತುರ್ತು ಸಂಖ್ಯೆಗೆ ಕರೆ ಮಾಡಿ
ಯಾರಿಗಾದರೂ ಹೃದಯಾಘಾತವಾದಾಗ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ವೈದ್ಯಕೀಯ ತುರ್ತು ಸಂಖ್ಯೆಗೆ ಕರೆ ಮಾಡುವುದು. ಆಂಬ್ಯುಲೆನ್ಸ್ ಸಿಗದಿದ್ದರೆ ಹತ್ತಿರದ ಆಸ್ಪತ್ರೆಗೆ ಆಟೋ ಇಲ್ಲವೇ ಯಾವುದಾದರೂ ವಾಹನದ ಮೂಲಕ ಆಸ್ಪತ್ರೆ ತಲುಪಿ.
>> ಆಸ್ಪಿರಿನ್ ತೆಗೆದುಕೊಳ್ಳಿ
ಹೃದಯಾಘಾತವಾದಾಗ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳಿ. ಆಸ್ಪಿರಿನ್ ನಿಮ್ಮ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಸಹಾಯ ಮಾಡುತ್ತದೆ. ಹೃದಯಾಘಾತದ ಸಮಯದಲ್ಲಿ ಅದನ್ನು ತೆಗೆದುಕೊಳ್ಳುವುದರಿಂದ ಹೃದಯ ಹಾನಿಯನ್ನು ಕಡಿಮೆ ಮಾಡಬಹುದು. ಆಸ್ಪಿರಿನ್ ಅಲರ್ಜಿ ಇದ್ದರೆ ಅಥವಾ ವೈದ್ಯರು ಆಸ್ಪಿರಿನ್ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರೆ ಯಾವ ಕಾರಣಕ್ಕೂ ಈ ಮಾತ್ರೆ ನುಂಗಬೇಡಿ.
>> ಡಿಫಿಬ್ರಿಲೇಟರ್ ಬಳಸಿ
ರೋಗಿಯು ಪ್ರಜ್ಞಾಹೀನನಾಗಿದ್ದರೆ ಮತ್ತು ಬಾಹ್ಯ ಡಿಫಿಬ್ರಿಲೇಟರ್ (AED) ತಕ್ಷಣ ಲಭ್ಯವಿದ್ದರೆ, ಅದನ್ನು ಬಳಸಿ. ಹೃದಯ ಬಡಿತವು ಕೆಲವು ಕಾರಣಕ್ಕಾಗಿ ವೇಗಗೊಂಡಾಗ ಅಥವಾ ನಿಧಾನವಾದಾಗ ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಹೃದಯಾಘಾತದಂತಹ ಸಂದರ್ಭಗಳಲ್ಲಿ ಈ ಸಾಧನವು ತುಂಬಾ ಪ್ರಯೋಜನಕಾರ.
>> CPR ನೀಡಲು ಪ್ರಾರಂಭಿಸಿ:
ರೋಗಿಯು ಪ್ರಜ್ಞಾಹೀನನಾಗಿದ್ದರೆ, ಅವನಿಗೆ CPR ನೀಡಲು ಪ್ರಾರಂಭಿಸಿ. ವ್ಯಕ್ತಿಯು ಉಸಿರಾಡದಿದ್ದರೆ ಅಥವಾ ನಿಮಗೆ ನಾಡಿಮಿಡಿತ ಸಿಗದಿದ್ದರೆ ವೈದ್ಯಕೀಯ ಸಹಾಯ ಸಿಗುವವರೆಗೆ ರಕ್ತದ ಹರಿವನ್ನು ಕಾಪಾಡಿಕೊಳ್ಳಲು CPR ಅನ್ನು ಪ್ರಾರಂಭಿಸಿ. ಇದನ್ನು ಮಾಡಲು ವ್ಯಕ್ತಿಯ ಎದೆಯ ಮಧ್ಯಭಾಗವನ್ನು ನಿಮ್ಮ ಎರಡು ಅಂಗೈಗಳಿಂದ ಜೋರಾಗಿ ಮತ್ತು ವೇಗವಾಗಿ ತಳ್ಳಿರಿ. ಇದನ್ನು ನಿಮಿಷಕ್ಕೆ ಸುಮಾರು 100 ರಿಂದ 120 ಬಾರಿ ಮಾಡಿ.
>> ಕಪ್ಪು ಮೆಣಸಿನ ಪುಡಿ ನೀರು ಕುಡಿಸಿ
ಕಪ್ಪು ಮೆಣಸಿನ ಪುಡಿ ಸ್ಯಾಲಿಸಿಲೇಟ್ಗಳನ್ನು ಹೊಂದಿದೆ. ಕೆಲವರು ಇದನ್ನು ಆಹಾರದಲ್ಲಿ ಸೇರಿಸುವುದರಿಂದ ರಕ್ತ ತೆಳುವಾಗುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳುತ್ತಾರೆ. ವೈಜ್ಞಾನಿಕ ಪುರಾವೆಗಳು ಇದು ರಕ್ತ ತೆಳುವಾಗಿಸುವ ಗುಣಗಳನ್ನು ಕಪ್ಪು ಮೆಣಸು ಹೊಂದಿದೆ ಎಂದು ತೋರಿಸಿಲ್ಲ. ಆದರೂ ಕೆಲವರ ಪ್ರಕಾರ ಕಪ್ಪು ಮೆಣಸಿನ ಪುಡಿ ರಕ್ತ ಹೆಪ್ಪುಗಟ್ಟದಂತೆ ತಡೆಯಲು ಸಹಾಯ ಮಾಡುತ್ತವೆ. ಹೃದಯಾಘಾತದ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿದಾಗ ಕಪ್ಪು ಮೆಣಸಿನ ಪುಡಿ ಸೇವನೆ ಹೆಚ್ಚಿಸಿ. ಇದರಿಂದ ಹಾರ್ಟ್ ಅಟ್ಯಾಕ್ ಅಪಾಯವನ್ನು ತಡೆಯಬಹುದು.
ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

[…] […]