ಚನ್ನರಾಯಪಟ್ಟಣ, ಜೂನ್ 19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 55ನೇ ಹುಟ್ಟುಹಬ್ಬದ ಅಂಗವಾಗಿ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ಮತ್ತು ಬ್ರೆಡ್ ವಿತರಣೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಯುವ ಕಾಂಗ್ರೆಸ್ ಸಮಿತಿಯವರು ಆಯೋಜಿಸಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಾಲೂಕು ಆರೋಗ್ಯಾಧಿಕಾರಿ ಡಾ. ಮಹೇಶ್ ಅವರು ಮಾತನಾಡುತ್ತಾ, “ಸಾರ್ವಜನಿಕ ಹಿತದ ದೃಷ್ಟಿಯಿಂದ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಬಹುಮುಖ್ಯ. ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ರೋಗಿಗಳಿಗೆ ಹಣ್ಣು ಹಂಪಲು ನೀಡುತ್ತಿರುವುದು ಸಂತೋಷದ ಸಂಗತಿ. ಮುಂದಿನ ದಿನಗಳಲ್ಲಿ ಯುವ ಮುಖಂಡರು ಇನ್ನೂ ಜನಸೇವೆ ಮಾಡಲಿ,” ಎಂದರು.
ಯುವ ಕಾಂಗ್ರೆಸ್ ಮುಖಂಡ ಸಿಎಸ್ ಯುವರಾಜ್ ಮಾತನಾಡಿ, “ರಾಹುಲ್ ಗಾಂಧಿಯವರು ನಮ್ಮಂತಹ ಯುವಕರಿಗೆ ಪ್ರೇರಣಾ ಶಕ್ತಿಯು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನಡೆಸಿದ ‘ಭಾರತ ಜೋಡೋ ಯಾತ್ರೆ’ ಮೂಲಕ ಅವರು ರಾಷ್ಟ್ರದ ಏಕತೆಗೆ ಮಾದರಿಯಾಗಿದೆ. ಮುಂಬರುವ ದಿನಗಳಲ್ಲಿ ಅವರು ಪ್ರಧಾನಿಯಾಗಲಿ ಎಂಬುದು ನಮ್ಮ ಆಶಯ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಖಾನ್ ವಿನೋದ್, ನುಗ್ಗೆಹಳ್ಳಿ ಕಿರಣ್, ದಿಲೀಪ್, ರುದ್ರೇಶ್, ಬಾಲು, ಮಹೇಶ್, ಜಬಿವುಲ್ಲಾ, ಗಣೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ಣ ವ್ಯವಸ್ಥೆಯನ್ನು ಯುವ ಕಾಂಗ್ರೆಸ್ ತಂಡ ಕೈಗೊಂಡಿತ್ತು.
- ಮಂಜುನಾಥ್ ಐ.ಕೆ
ಇರಾನ್ ಮೇಲೆ ದಾಳಿ ಮಾಡದಂತೆ ಅಮೆರಿಕಕ್ಕೆ ರಷ್ಯಾ ಸೂಚನೆ, ಪರಮಾಣು ದುರಂತದ ಎಚ್ಚರಿಕೆ

[…] […]