ಗದಗ ಜಿಲ್ಲೆ ಜಲಶಕ್ತಿ ಅಭಿಯಾನದ ಅಂಗವಾಗಿ ನಡೆಯುತ್ತಿರುವ ಜಲಸಂಚಾಯಿ ಜನಭಾಗಿದಾರಿ 1.0 ಕಾರ್ಯಕ್ರಮದಲ್ಲಿ ಐತಿಹಾಸಿಕ ಸಾಧನೆ ಮಾಡಿ ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಪ್ರಶಂಸೆಗೆ ಪಾತ್ರವಾಗಿದೆ.
ಜಲಸಂಚಾಯಿ ಅಂದರೆ ಸ್ಥಳೀಯ ಸಮುದಾಯದ ಸಹಯೋಗದಲ್ಲಿ ಜಲ ಸಂರಕ್ಷಣೆಯನ್ನು ಉತ್ತೇಜಿಸುವ ಯೋಜನೆ. ಇದರ ಗುರಿಗಳು:
- ಮಳೆ ನೀರನ್ನು ಸಂಗ್ರಹಿಸುವುದು
- ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು
- ಜಲ ಸಂರಕ್ಷಣೆಯ ಸಂಸ್ಕೃತಿಯನ್ನು ಬೆಳೆಸುವುದು
- ಹವಾಮಾನ ಸ್ಥಿತಿಗತಿಯನ್ನು ಉತ್ತಮಗೊಳಿಸುವುದು
- ನೀರಿನ ಗುಣಮಟ್ಟವನ್ನು ಸುಧಾರಿಸುವುದು
‘ನೀರಿಗಾಗಿ ಒಂದಾಗಿ – ಪ್ರತಿಹನಿ ನೀರನ್ನು ಸಂರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಈ ಅಭಿಯಾನವು ಸ್ಥಳೀಯ ಸಮುದಾಯ, ಸರ್ಕಾರಿ ಸಂಸ್ಥೆಗಳು ಮತ್ತು ಎನ್.ಜಿ.ಓ.ಗಳ ಸಹಯೋಗದಲ್ಲಿ ನಡಗುತ್ತಿದೆ. ನೀರಿನ ಕೊರತೆಯ ಸವಾಲಿಗೆ ಸಮರ್ಥ ಪರಿಹಾರ ನೀಡುವುದು ಮತ್ತು ಜಲಸಂಪತ್ತಿನ ಸುಧಾರಣೆಯತ್ತ ಪ್ರೇರೇಪಿಸುವುದು ಇದರ ಪ್ರಮುಖ ಉದ್ದೇಶ.
ಗದಗ ಜಿಲ್ಲೆ ಈ ಸಾಧನೆ ಮೂಲಕ ನೀರಿನ ಸಂರಕ್ಷಣೆಯಲ್ಲಿ ಮೆಟ್ಟಿಲು ನುಗ್ಗಿದ ಪ್ರತಿ ಹಂತದಲ್ಲಿ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬ ಸಂದೇಶವನ್ನು ರಾಜ್ಯಕ್ಕೆ ನೀಡಿದ್ದಾರೆ.
