ನವದೆಹಲಿ, ಸೆ.24: ರಕ್ಷಣಾ ಸಚಿವಾಲಯ (MoD) ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ ಅವರ ಸೇವಾ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ. ಈ ಮೂಲಕ ಅವರು 2026ರ ಮೇ 30ರವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಜನರಲ್ ಚೌಹಾಣ್ ಅವರು 2022ರ ಸೆಪ್ಟೆಂಬರ್ 30ರಿಂದ CDS ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೇಶದ ರಕ್ಷಣಾ ವ್ಯವಸ್ಥೆಯ ಉನ್ನತ ಮಟ್ಟದ ಕಾರ್ಯತಂತ್ರ ನಿರ್ಧಾರಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ರಕ್ಷಣಾ ಸಚಿವಾಲಯದ ಈ ನಿರ್ಧಾರದಿಂದ ಸಶಸ್ತ್ರ ಪಡೆಗಳ ಸಾಮರಸ್ಯ ಮತ್ತು ಕಾರ್ಯಪಟುತ್ವ ಹೆಚ್ಚಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
