🍀ಸರ್ಕಾರಿ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸಲು ಯಾವ ರಾಜ್ಯ ಸರ್ಕಾರವು AI-ಚಾಲಿತ ಚಾಟ್ಬಾಟ್ ‘ಸಾರಥಿ'(Sarathi) ಅನ್ನು ಪ್ರಾರಂಭಿಸಿದೆ?
– ಹರಿಯಾಣ
🍀ಏಷ್ಯಾದ ಅತಿದೊಡ್ಡ ಅಂತರಕಾಲೇಜು ತಂತ್ರಜ್ಞಾನ ಮತ್ತು ಉದ್ಯಮಶೀಲತಾ ಉತ್ಸವವನ್ನು ಯಾರು ಉದ್ಘಾಟಿಸಿದರು?
– ಸಿಡಿಎಸ್ ಜನರಲ್ ಅನಿಲ್ ಚೌಹಾಣ್
🍀ಭಾರತೀಯ ವಾಯುಪಡೆಯು ಯಾವ ದೇಶದಲ್ಲಿ ಬಹುರಾಷ್ಟ್ರೀಯ ವಾಯು ವ್ಯಾಯಾಮ INIOCHOS-25 ನಲ್ಲಿ ಭಾಗವಹಿಸುತ್ತಿದೆ?
– ಗ್ರೀಸ್
🍀ಭಾರತೀಯ ಬ್ಯಾಂಕುಗಳ ಸಂಘದ (ಐಬಿಎ) ಹೊಸ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ?
– ಚಲ್ಲಾ ಶ್ರೀನಿವಾಸುಲು ಸೆಟ್ಟಿ(Challa Srinivasulu Setty)
🍀ವೇಗದ ಕರಗುವಿಕೆಯಿಂದಾಗಿ ಇತ್ತೀಚಿಗೆ ಸುದ್ದಿಯಲ್ಲಿದ್ದ ಲೆವಿಸ್ ಹಿಮನದಿ (Lewis Glacier) ಯಾವ ಪರ್ವತದ ಮೇಲೆ ಇದೆ?
– ಕೀನ್ಯಾ ಪರ್ವತ (Mount Kenya)
🍀ಬೈಲುಕುಪ್ಪೆ ಎಂಬುದು ಯಾರ ಮರುವಸತಿ ಕೇಂದ್ರವಾಗಿದೆ?
– ಟಿಬೆಟಿಯನ್ನರ ಮರುವಸತಿ ಕೇಂದ್ರ
🍀 ನೀರು ಎಷ್ಟು ಡಿಗ್ರಿ ಸೆಂಟಿಗ್ರೇಡ್ನಲ್ಲಿ ಕುದಿಯುತ್ತದೆ?
-100 degree celsiu
🍀ಉತ್ತರ ಅಮೇರಿಕದ ಅತಿ ಉದ್ದವಾದ ನದಿ ಯಾವುದು?
– ಮಿಸ್ಸಿಸ್ಸಿಪ್ಪಿ
🍀 ಹೊಯ್ಸಳರು ಕಟ್ಟಿಸಿದ ಕೇಶವ ದೇವಾಲಯ ಎಲ್ಲಿದೆ?
-ಸೋಮನಾಥಪುರ
🍀ಸಂವಿಧಾನದ ಅನ್ವಯ ಭಾರತದಲ್ಲಿನ ಅತಿ ಉನ್ನತ ನ್ಯಾಯಾಲಯ ಯಾವುದು?
-ಸರ್ವೋಚ್ಛ ನ್ಯಾಯಾಲಯ (Supreme court)
🍀 ‘ಮತ್ತ ವಿಲಾಸ ಪ್ರಹಸನ’ ಎಂಬ ನಾಟಕವನ್ನು ರಚಿಸಿದವರು ಯಾರು?
– ಮಹೇಂದ್ರ ವರ್ಮನ್
🍀ಅತಿ ಹೆಚ್ಚು ಬಾಸುಮತಿ ಅಕ್ಕಿಯನ್ನು ಉತ್ಪಾದಿಸುವ ರಾಜ್ಯ ಯಾವುದು?
-ಪಂಜಾಬ್
🍀 ‘ನಿಫೆ’ (nife) ಎಂಬ ಪದ ಯಾವ ವಿಷಯಕ್ಕೆ ಸಂಬಂಧಿಸಿದೆ..?
-ಭೂಮಿಯ ಮಧ್ಯಭಾಗ
🍀 ಭಾರತದ ಸಂವಿಧಾನವು ಕಾರ್ಯಾಚರಣೆಗೆ ಬಂದ ದಿನಾಂಕ ಯಾವುದು?
-26ನೇ ಜನವರಿ 1950
🍀ಬ್ರೇಕ್ಸಿಟ್ ಪದದ ಅರ್ಥ ಏನು..?
-ಬ್ರಿಟನ್ ಯುರೋಪ ಯೂನಿಯನ್ ದಿಂದ ಹೊರಗೆ ಬಂದದ್ದು
