ಪಣಜಿ (ಗೋವಾ): ಗೋವಾ ರಾಜ್ಯವು ದೇಶದಲ್ಲಿ ಶೇ.100 ರಷ್ಟು ಸೈಬರ್ ವಂಚನೆ ಪ್ರತಿಕ್ರಿಯೆ ವ್ಯಾಪ್ತಿ (Cyber Fraud Response Coverage) ಸಾಧಿಸಿದ ಮೊದಲ ರಾಜ್ಯ ಎಂಬ ಮಹತ್ವದ ದಾಖಲೆ ಬರೆಯಿತು. ಸೈಬರ್ ಸುರಕ್ಷತೆ ಮತ್ತು ನಾಗರಿಕರ ರಕ್ಷಣೆಯ ಕಡೆಗೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ರಾಷ್ಟ್ರಮಟ್ಟದಲ್ಲಿ ಮಾದರಿಯಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸೈಬರ್ ದೂರುಗಳಿಗೆ ತ್ವರಿತ ಪ್ರತಿಕ್ರಿಯೆ ನೀಡಲು 1930 ರಾಷ್ಟ್ರೀಯ ಸೈಬರ್ ವಂಚನೆ ಸಹಾಯವಾಣಿಯ ಬಳಕೆ ಹೆಚ್ಚುವರಿಯಾಗಿ ಬಲಗೊಂಡಿದೆ. ಈ ಹಾಟ್ಲೈನ್ ಮೂಲಕ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ದೂರುಗಳು ತಕ್ಷಣ ನೋಂದಣಿ ಆಗಿ, ಹಣ ತಡೆಯುವಿಕೆ ಹಾಗೂ ತನಿಖೆ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ.
ಇದನ್ನು ಓದಿ: ಎಂಜಿನಿಯರಿಂಗ್ ವೃತ್ತಿಗೆ ಪರವಾನಗಿ ಕಡ್ಡಾಯ: ಶೀಘ್ರದಲ್ಲೇ ಎಐಸಿಟಿಇ ಹೊಸ ಮಸೂದೆ
ಗೋವಾ ತನ್ನ ಸೈಬರ್ ಅಪರಾಧ ಮೂಲಸೌಕರ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ವಿಶೇಷ ತಂತ್ರಜ್ಞಾನ ಘಟಕಗಳು, ತರಬೇತಿಗೊಂಡ ಸಿಬ್ಬಂದಿ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳನ್ನು ಜಾರಿಗೊಳಿಸಿದ್ದು, ಇದರಿಂದ ಪ್ರತಿಯೊಂದು ಸೈಬರ್ ವಂಚನೆ ಪ್ರಕರಣಕ್ಕೂ ಶೇಕಡಾ 100ರಷ್ಟು ಪ್ರತಿಕ್ರಿಯೆ ಸಾಧ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಕಾಲಘಟ್ಟದಲ್ಲಿ, ಗೋವಾ ಸಾಧಿಸಿರುವ ಈ ದಾಖಲೆ ಇತರೆ ರಾಜ್ಯಗಳಿಗೆ ಮಾದರಿಯಾಗುವಂತಿದ್ದು, ರಾಷ್ಟ್ರದ ಸೈಬರ್ ಸುರಕ್ಷತೆಯ ಬಲವರ್ಧನೆಗೆ ಸಹಾಯಕವಾಗಲಿದೆ.
