ಬೆಂಗಳೂರು, ಜುಲೈ 1: ರಾಜ್ಯಾದ್ಯಂತ ತೀವ್ರವಾಗಿ ವರದಿಯಾಗುತ್ತಿರುವ ಹೃದಯಾಘಾತ ಪ್ರಕರಣಗಳ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ಸ್ಟೆಮಿ (STEMI) ತುರ್ತು ಚಿಕಿತ್ಸೆ ಯೋಜನೆಗೆ ರಾಜ್ಯವ್ಯಾಪಕ ವಿಸ್ತರಣೆ ಘೋಷಿಸಿದೆ. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಈ ಕುರಿತು ಮಾಹಿತಿ ನೀಡಿದ್ದು, ಈಗಿನ 86 ತಾಲ್ಲೂಕುಗಳಿಗೆ ಮೀರಿ, ಎಲ್ಲಾ ತಾಲ್ಲೂಕು ಕೇಂದ್ರಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುತ್ತದೆ ಎಂದಿದ್ದಾರೆ.
ಹಬ್ ಆಂಡ್ ಸ್ಪೋಕ್ (Hub and Spoke) ಮಾದರಿಯಲ್ಲಿ ಆಧಾರಿತ ಈ ಯೋಜನೆಯ ಮೂಲಕ, ತಾಲ್ಲೂಕು ಆಸ್ಪತ್ರೆಗಳನ್ನೇ ತುರ್ತು ಹೃದಯ ಚಿಕಿತ್ಸಾ ಕೇಂದ್ರಗಳಾಗಿ ಪರಿಗಣಿಸಲಾಗುತ್ತಿದ್ದು, ಪ್ರಾಥಮಿಕ ಚಿಕಿತ್ಸೆ ಕೂಡಲೇ ದೊರೆಯುವ ಮೂಲಕ ಹೃದಯಾಘಾತದಿಂದ ರೋಗಿಗಳ ಜೀವ ಉಳಿಸುವ ಸಾಧ್ಯತೆ ಹೆಚ್ಚಾಗಲಿದೆ.
ಇದನ್ನು ಓದಿ: ಹಾಸನ: ಹೃದಯಾಘಾತ ಪ್ರಕರಣಗಳ ನಡುವೆ ತುರ್ತು ‘ಸಿಪಿಆರ್’ ತರಬೇತಿ ಅಗತ್ಯ – ಡಾ.ಎನ್.ರಮೇಶ್ ಅಭಿಮತ
ಹಾಸನ ಸೇರಿದಂತೆ ಇತ್ತೀಚೆಗೆ ಹೃದಯಾಘಾತದಿಂದ ಸಾವುಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳ ಸಮಸ್ಯೆ ಈ ಯೋಜನೆಯ ಮೂಲಕ ಕಡಿಮೆಯಾಗಲಿದ್ದು, ಆಂಬುಲೆನ್ಸ್ ಸಂಪರ್ಕ, ECG ಸೌಲಭ್ಯ, ದೂರದರ್ಶಿ ತಜ್ಞರ ಮಾರ್ಗದರ್ಶನ ಸೇರಿದಂತೆ ಮೂಲಭೂತ ವ್ಯವಸ್ಥೆಗಳನ್ನು ದಟ್ಟಗಿಸಲು ಸರ್ಕಾರ ಬದ್ಧವಾಗಿದೆ.
ಮುಂದಿನ ವರ್ಷದೊಳಗೆ ಈ ಯೋಜನೆಯನ್ನು ರಾಜ್ಯದ ಪ್ರತಿಯೊಂದು ತಾಲ್ಲೂಕಿಗೂ ತಲುಪಿಸುವ ಗುರಿ ನಿಗದಿಪಡಿಸಲಾಗಿದೆ. ಗ್ರಾಮೀಣ ಹಾಗೂ ಅಡವಿಭಾಗಗಳಲ್ಲಿ ತಕ್ಷಣದ ವೈದ್ಯಕೀಯ ನೆರವಿನ ಕೊರತೆಯನ್ನು ಈ ಯೋಜನೆ ಹೇಗೆ ನೀಗಿಸಲಿದೆ ಎಂಬುದು ಗಮನಾರ್ಹ.
ಸ್ಟೆಮಿ (STEMI) ಯೋಜನೆ ಎಂದರೆ ???
ಸ್ಟೆಮಿ (STEMI) ಯೋಜನೆ ಎಂದರೆ ST-Elevation Myocardial Infarction–ಹೃದಯಾಘಾತದ ತುರ್ತು ಪರಿಸ್ಥಿತಿಗೆ ತಕ್ಷಣ ಚಿಕಿತ್ಸೆ ನೀಡಲು ರೂಪಿಸಲಾದ ಆರೋಗ್ಯ ಯೋಜನೆ. ಹೃದಯಾಘಾತದ ಸಂದರ್ಭದಲ್ಲಿ ಮೊದಲ 60 ನಿಮಿಷಗಳ ಕಾಲ ‘ಗೋಲ್ಡನ್ ಅವರ್’ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ತಕ್ಷಣ ಚಿಕಿತ್ಸೆ ನೀಡಿದರೆ ರೋಗಿಯ ಜೀವ ಉಳಿಯುವ ಸಾಧ್ಯತೆ ಬಹಳ ಹೆಚ್ಚಾಗಿರುತ್ತದೆ. ಈ ಕಾರಣದಿಂದ ಸ್ಟೆಮಿ ಯೋಜನೆ ‘ಹಬ್ ಅಂಡ್ ಸ್ಪೋಕ್’ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿ (Spoke) ECG ಯಂತ್ರ, ತರಬೇತಿಗೊಂಡ ಸಿಬ್ಬಂದಿ, ತುರ್ತು ಔಷಧಗಳೊಂದಿಗೆ ರೋಗಿಗೆ ತಕ್ಷಣ thrombolysis ಚಿಕಿತ್ಸೆ ನೀಡಲಾಗುತ್ತದೆ. ನಂತರ ಅವರನ್ನು ಜಿಲ್ಲಾ ಆಸ್ಪತ್ರೆಗೆ (Hub) ಕಳುಹಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತದೆ. ಈ ಮಾದರಿ ತುರ್ತು ಸಮಯದಲ್ಲಿ ಚಿಕಿತ್ಸೆಯ ಗುಣಮಟ್ಟ ಮತ್ತು ತ್ವರಿತತೆಗೆ ಮಹತ್ವ ನೀಡುತ್ತದೆ.
ಯೋಜನೆಯ ಕಾರ್ಯಪದ್ಧತಿ – Hub & Spoke Model:
-
Spoke Hospital (ತಾಲ್ಲೂಕು ಮಟ್ಟದ ಆಸ್ಪತ್ರೆ):
ರೋಗಿಗೆ ತಕ್ಷಣ ECG ತೆಗೆದು, ಹೃದಯಾಘಾತ ದೃಢಪಡಿಸಿದರೆ, ತಕ್ಷಣ thrombolysis ನೀಡಲಾಗುತ್ತದೆ. -
Hub Hospital (ಜಿಲ್ಲಾ ಮಟ್ಟದ ಶ್ರೇಣಿಪಡಿತ ಆಸ್ಪತ್ರೆ):
ರೋಗಿಯನ್ನು ಹೆಚ್ಚಿನ ಚಿಕಿತ್ಸೆಗೆ (ಅಂದರೆ PCI – Primary Coronary Intervention) ಸ್ಥಳಾಂತರಿಸಲಾಗುತ್ತದೆ.
ಹೆಚ್ಚಿನ ತಜ್ಞರು ಇಲ್ಲಿಗೆ ಲಭ್ಯರಾಗುತ್ತಾರೆ.

[…] […]
[…] […]