ನವದೆಹಲಿ, ನ.5: ವಿಮಾನದಲ್ಲಿ ಪ್ರಯಾಣಿಸುವವರಿಗೆ ಸಂತಸದ ಸುದ್ದಿ. ಮುಂಗಡವಾಗಿ ಕಾಯ್ದಿರಿಸಿದ ವಿಮಾನ ಟಿಕೆಟ್ಗಳನ್ನು 48 ಗಂಟೆಗಳೊಳಗಾಗಿ ರದ್ದುಪಡಿಸಿದರೆ ಅಥವಾ ಪ್ರಯಾಣದ ದಿನಾಂಕ ಬದಲಿಸಿದರೆ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ಶುಲ್ಕ ವಸೂಲು ಮಾಡಲು ಸಾಧ್ಯವಿಲ್ಲ.
ಈ ಹೊಸ ನಿಯಮವನ್ನು ಶೀಘ್ರದಲ್ಲೇ ಜಾರಿಗೆ ತರಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಕರಡು ನಿಯಮಗಳನ್ನು ಪ್ರಕಟಿಸಿದೆ.
ಕರಡು ಪ್ರಕಾರ,
-
ಟಿಕೆಟ್ ರದ್ದುಪಡಿಸಿದ ನಂತರ 21 ಕೆಲಸದ ದಿನಗಳೊಳಗೆ ಹಣವನ್ನು ಪ್ರಯಾಣಿಕರಿಗೆ ಮರುಪಾವತಿಸಬೇಕು.
-
ಮರುಪಾವತಿಯನ್ನು ಕಡ್ಡಾಯವಾಗಿ ಡಿಜಿಟಲ್ ವ್ಯಾಲೆಟ್ಗೆ ಮಾತ್ರ ನೀಡುವ ಬದಲು, ಪ್ರಯಾಣಿಕರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಡೆಯುವ ಆಯ್ಕೆ ಇರುತ್ತದೆ.
ಹಾಗಾದರೂ, ಈ ನಿಯಮವು ದೇಶೀಯ ಮಾರ್ಗದ 5 ದಿನಗಳೊಳಗಿನ ಹಾಗೂ ಅಂತಾರಾಷ್ಟ್ರೀಯ ಮಾರ್ಗದ 15 ದಿನಗಳೊಳಗಿನ ಬುಕಿಂಗ್ಗಳಿಗೆ ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ.
ಇದನ್ನು ಓದಿ: ರಾಜ್ಯದಲ್ಲಿನ 2025–26ನೇ ಸಾಲಿನ SSLC ಹಾಗೂ PUC ಅಂತಿಮ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟ
ಈ ಕ್ರಮದಿಂದ ವಿಮಾನ ಪ್ರಯಾಣಿಕರಿಗೆ ಅನಾವಶ್ಯಕ ಹಣದ ನಷ್ಟ ತಪ್ಪಲಿದ್ದು, ವಿಮಾನಯಾನ ಸಂಸ್ಥೆಗಳ ಮೇಲೆ ಗ್ರಾಹಕಪರ ನಡವಳಿಕೆ ಕಾಪಾಡುವ ಒತ್ತಡ ಹೆಚ್ಚಲಿದೆ ಎಂದು ತಜ್ಞರು ತಿಳಿಸಿದ್ದಾರೆ.

[…] ಇದನ್ನು ಓದಿ: ವಿಮಾನ ಪ್ರಯಾಣಿಕರಿಗೆ ಶುಭಸುದ್ದಿ — ಟಿಕೆಟ… […]