ನವದೆಹಲಿ, ಅಕ್ಟೋಬರ್ 1: ಟೈಪ್ 2 ಮಧುಮೇಹ ಹೊಂದಿರುವ ವಯಸ್ಕರಿಗಾಗಿ ಹೊಸ ಓಝೆಂಪಿಕ್ (ಸೆಮಾಗ್ಲುಟೈಡ್) ಔಷಧ ಭಾರತದಲ್ಲಿ ಅನುಮೋದಿಸಲಾಗಿದೆ. ಕೇಂದ್ರ ಔಷಧ ನಿಯಂತ್ರಕ ಸಂಸ್ಥೆ CDSCO ಈ ನಿರ್ಣಯವನ್ನು ತೆಗೆದುಕೊಂಡಿದ್ದು, ಇದು ದೇಶದ ಲಕ್ಷಾಂತರ ಮಧುಮೇಹ ರೋಗಿಗಳಿಗೆ ನೆರವಾಗಲಿದೆ.
ಡೆನ್ಮಾರ್ಕ್ ಮೂಲದ ನೊವೊ ನಾರ್ಡಿಸ್ಕ್ ಕಂಪನಿ ಭಾರತದಲ್ಲಿ ಓಝೆಂಪಿಕ್ ಬಿಡುಗಡೆ ಮಾಡುತ್ತಿದೆ. ವಾರಕ್ಕೆ ಒಂದೇ ಬಾರಿ ಇಂಜೆಕ್ಷನ್ ರೂಪದಲ್ಲಿ ನೀಡಲಾಗುವ ಈ ಔಷಧವು, ಮೊದಲಿಗೆ 2017 ರಲ್ಲಿ US FDA ಅನುಮೋದನೆ ಪಡೆದಿತ್ತು. ಭಾರತದಲ್ಲಿ ಇದರ ಬೆಲೆಯನ್ನು ಇನ್ನೂ ಘೋಷಿಸಿಲ್ಲ.
ಓಝೆಂಪಿಕ್ ಹೇಗೆ ಕೆಲಸ ಮಾಡುತ್ತದೆ?
- ಇದು GLP-1 ಗ್ರಾಹಕ ಅಗೋನಿಸ್ಟ್, ದೇಹದ ನೈಸರ್ಗಿಕ ಹಾರ್ಮೋನ್ ಕಾರ್ಯವನ್ನು ಅನುಕರಿಸುತ್ತದೆ.
- ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ.
- ಇನ್ಸುಲಿನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ.
- ಹೊಟ್ಟೆ ಖಾಲಿಯಾಗುವ ಗತಿಯನ್ನೇ ನಿಧಾನಗೊಳಿಸುತ್ತದೆ.
- ಹಸಿವನ್ನು ನಿಗ್ರಹಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ: 9 ಗಂಟೆಗಳ ನಿದ್ದೆ ಕೂಡ ‘ಅಕಾಲಿಕ ಮರಣ’ಕ್ಕೆ ಕಾರಣವಾಗಬಹುದು: ಅಧ್ಯಯನ ವರದಿ!
ಪ್ರಯೋಜನಗಳು:
- ಟೈಪ್ 2 ಮಧುಮೇಹ ರೋಗಿಗಳಲ್ಲಿ ರಕ್ತದ ಸಕ್ಕರೆಯನ್ನು ನಿಯಂತ್ರಣೆ.
- ಹೆಚ್ಚಿನ ಪ್ರಮಾಣದಲ್ಲಿ ತೂಕ ಇಳಿಸಲು ಸಹಾಯ.
- ಹೃದಯ ರೋಗಿಗಳಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ.
ಅಪಾಯಗಳು:
- ವಾಂತಿ, ವಾಕರಿಕೆ ಮುಂತಾದ ಅಸ್ವಸ್ಥತೆ.
- ದೀರ್ಘಕಾಲದ ಪಿತ್ತಕೋಶ ಮತ್ತು ಗುಲ್ಮ ಸಮಸ್ಯೆಗಳು.
- ಕೆಲ ಸಂದರ್ಭಗಳಲ್ಲಿ ಮೂತ್ರಪಿಂಡ ಮತ್ತು ಥೈರಾಯ್ಡ್ ಸಮಸ್ಯೆಗಳು.
ಓಝೆಂಪಿಕ್ ಹೊಸ ತಂತ್ರಜ್ಞಾನದಿಂದ ಟೈಪ್ 2 ಮಧುಮೇಹವನ್ನು ಉತ್ತಮವಾಗಿ ನಿಯಂತ್ರಿಸಲು ಮತ್ತು ತೂಕ ಇಳಿಸಲು ಸಹಾಯ ಮಾಡುವ ಭರವಸೆಯ ಔಷಧವಾಗಿ ಮುಂದಾಗಿದೆ.

[…] […]