ಬೆಂಗಳೂರು, ಅಕ್ಟೋಬರ್ 9 — ರಾಜ್ಯದ ವಿವಿಧ ಸರ್ಕಾರಿ ಇಲಾಖೆ, ನಿಗಮ ಹಾಗೂ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತವಾಗಿ ಅಧಿಸೂಚನೆ ಪ್ರಕಟಿಸಿದೆ.
ಈ ಅಧಿಸೂಚನೆ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ಸ್ ಲಿಮಿಟೆಡ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೃಷಿ ಮಾರಾಟ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಡಿ ಹುದ್ದೆಗಳು ಲಭ್ಯವಿವೆ.
🧾 ಹುದ್ದೆಗಳ ವಿವರ:
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ — 18 + 07
- ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ — 07 + 14
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ — 40 + 04
- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ — 63 + 253
- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ — 19
- ಕೃಷಿ ಮಾರಾಟ ಇಲಾಖೆ — 180
- ತಾಂತ್ರಿಕ ಶಿಕ್ಷಣ ಇಲಾಖೆ — 50 + 43
- ಪದವಿ ಪೂರ್ವ ಶಿಕ್ಷಣ ಇಲಾಖೆ — 10
🎓 ಶೈಕ್ಷಣಿಕ ಅರ್ಹತೆ:
- ಪ್ರಥಮ ದರ್ಜೆ ಸಹಾಯಕ — ಪದವಿ
- ದ್ವಿತೀಯ ದರ್ಜೆ ಸಹಾಯಕ — ಪಿಯುಸಿ
- ಸಹಾಯಕ ಸಂಚಾರ ನಿರೀಕ್ಷಕ — ಪಿಯುಸಿ (ಕಲಾ/ವಾಣಿಜ್ಯ/ವಿಜ್ಞಾನದಲ್ಲಿ ಪ್ರಥಮ ದರ್ಜೆ)
- ನಿರ್ವಾಹಕ — ಪಿಯುಸಿ
- ಸಹಾಯಕ ಲೆಕ್ಕಿಗ — ಬಿಕಾಂ
- ಅಧಿಕಾರಿ — ಪದವಿ + ಎಂಬಿಎ
- ಕಿರಿಯ ಅಧಿಕಾರಿ — ಎಂ.ಎಸ್ಸಿ (ರಸಾಯನಶಾಸ್ತ್ರ)
- ಗ್ರಂಥಪಾಲಕರು — ಎಂ.ಲೈಬ್
- ಸಹಾಯಕ ಇಂಜಿನಿಯರ್ — ಬಿಇ (ಸಿವಿಲ್)
- ಕಿರಿಯ ಇಂಜಿನಿಯರ್ — ಡಿಪ್ಲೊಮಾ (ಸಿವಿಲ್)
- ಮಾರುಕಟ್ಟೆ ಮೇಲ್ವಿಚಾರಕರು — ಬಿ.ಎಸ್ಸಿ (ಕೃಷಿ ಮಾರ್ಕೆಟಿಂಗ್)
⏳ ವಯೋಮಿತಿ:
- ಸಾಮಾನ್ಯ ವರ್ಗ — 38 ವರ್ಷ
- 2A, 2B, 3A, 3B — 41 ವರ್ಷ
- SC/ST ಮತ್ತು ಪ್ರವರ್ಗ-1 — 43 ವರ್ಷ
📝 ಪರೀಕ್ಷಾ ಮಾದರಿ:
- OMR ಆಧಾರಿತ ಪರೀಕ್ಷೆ ನಡೆಯಲಿದ್ದು, ಪ್ರತಿಯೊಂದು ಪ್ರಶ್ನೆಗೆ ಸರಿಯಾದ ಉತ್ತರವನ್ನು ಶೇಡ್ ಮಾಡಬೇಕು.
- ತಪ್ಪು ಉತ್ತರಕ್ಕೆ ಋಣಾತ್ಮಕ ಮೌಲ್ಯಮಾಪನ ಅನ್ವಯ: ಪ್ರತಿ ತಪ್ಪಿಗೆ ¼ ಅಂಕ ಕಡಿತ.
- ಪರೀಕ್ಷಾ ವೇಳಾಪಟ್ಟಿ ಮತ್ತು ಪಠ್ಯಕ್ರಮವನ್ನು KEA ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
- ಒಂದೇ ಪಠ್ಯಕ್ರಮವಿರುವ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಯಲಿದೆ.
📌 ಅರ್ಜಿ ಸಲ್ಲಿಕೆ ಮತ್ತು ಮಾಹಿತಿ:
➡️ ಅಭ್ಯರ್ಥಿಗಳು ಕೆಇಎ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು:
🔗 https://cetonline.karnataka.gov.in/kea
KEA ಪ್ರಕಟಣೆ:
“ನೇಮಕಾತಿ ಪ್ರಕ್ರಿಯೆಯ ಕುರಿತು ಯಾವುದೇ ವೈಯಕ್ತಿಕ ಮಾಹಿತಿ ಕಳುಹಿಸಲಾಗುವುದಿಲ್ಲ. ಅಭ್ಯರ್ಥಿಗಳು ಆಗಿಂದಾಗ್ಗೆ ಅಧಿಕೃತ ವೆಬ್ಸೈಟ್ ವೀಕ್ಷಿಸಬೇಕು,” ಎಂದು ಕೆಇಎ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ: ಛತ್ತೀಸ್ಗಢದ ಬಲೋಡ್: ದೇಶದ ಮೊದಲ ಬಾಲ್ಯ ವಿವಾಹ ಮುಕ್ತ ಜಿಲ್ಲೆ ಘೋಷಣೆ

