ಪೋಷಕರಿಗೆ ಸುವಾರ್ತೆ: ‘ಎನ್‌ಪಿಎಸ್ ವಾತ್ಸಲ್ಯ’ ಯೋಜನೆಯ ಹೂಡಿಕೆ ನಿಮ್ಮ ಮಕ್ಕಳ ಭವಿಷ್ಯ ಭದ್ರ!

ಪೋಷಕರಿಗೆ ಸಂತಸದ ಸುದ್ದಿ ನೀಡಿದಂತೆ, ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅಡಿಯಲ್ಲಿ ಆರಂಭವಾದ ‘ವಾತ್ಸಲ್ಯ’ ಯೋಜನೆ ಮಕ್ಕಳ ಭವಿಷ್ಯಕ್ಕಾಗಿ ದೀರ್ಘಕಾಲೀನ ಹೂಡಿಕೆಗೆ ಶ್ರೇಷ್ಠ ಆಯ್ಕೆಯಾಗಿ ಹೊರಹೊಮ್ಮಿದೆ. ಈ ಯೋಜನೆಯ ಮೂಲಕ ಪೋಷಕರು ಮಕ್ಕಳ ಭವಿಷ್ಯಶೀಲ ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕ ಭದ್ರತೆಯನ್ನು ಪೂರೈಸಲು ನಿಶ್ಚಿತ ಮೊತ್ತವನ್ನು ಸಂಗ್ರಹಿಸಬಹುದು. ಕಡಿಮೆ ಮೊತ್ತದಿಂದ ಪ್ರಾರಂಭಿಸಿ ಸುಧೀರ್ಘ ಅವಧಿಯಲ್ಲಿ ಭದ್ರ ಮಿಂತಿಕೆ ಗಳಿಸಬಹುದಾಗಿದೆ ಎಂಬುದು ಇದರ ವಿಶೇಷತೆ.