ನವದೆಹಲಿ: ದೇಶದ ಕೃಷಿ ಕ್ಷೇತ್ರಕ್ಕೆ ಮತ್ತೊಂದು ದೊಡ್ಡ ಬದಲಾವಣೆ ತರಲಿರುವ ಎರಡು ಪ್ರಮುಖ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಒಟ್ಟು ₹35,440 ಕೋಟಿ ರೂ.ಗಳ ವೆಚ್ಚದಲ್ಲಿ ಈ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅದರಲ್ಲಿ ಪ್ರಮುಖವಾದ ‘ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ’ಗೆ ₹24,000 ಕೋಟಿ ರೂ. ಮೀಸಲಿರಿಸಲಾಗಿದೆ.
ಈ ಯೋಜನೆಯ ಉದ್ದೇಶ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು, ಬೆಳೆ ವೈವಿಧ್ಯೀಕರಣ, ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆ, ಕೊಯ್ಲಿನ ನಂತರದ ಸಂಗ್ರಹಣಾ ಸೌಲಭ್ಯ ವೃದ್ಧಿ ಮತ್ತು ನೀರಾವರಿ ವ್ಯವಸ್ಥೆ ಸುಧಾರಣೆ. ಜೊತೆಗೆ ಆಯ್ದ 100 ಜಿಲ್ಲೆಗಳಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿ ಸಾಲದ ಲಭ್ಯತೆಯನ್ನು ಸುಗಮಗೊಳಿಸಲಾಗುತ್ತದೆ.
ಇದಕ್ಕೂ ಜೊತೆಗೆ, ಪ್ರಧಾನಿ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಮಿಷನ್ಗೂ ಚಾಲನೆ ನೀಡಿದರು. ಈ ಯೋಜನೆಗೆ ₹11,440 ಕೋಟಿ ರೂ. ವೆಚ್ಚವಾಗಲಿದ್ದು, ದ್ವಿದಳ ಧಾನ್ಯಗಳ ಉತ್ಪಾದಕತೆ, ಕೃಷಿ ಪ್ರದೇಶ ವಿಸ್ತರಣೆ, ಸಂಗ್ರಹಣೆ ಮತ್ತು ಸಂಸ್ಕರಣಾ ಮೂಲಸೌಕರ್ಯ ಬಲಪಡಿಸುವುದು ಹಾಗೂ ನಷ್ಟವನ್ನು ಕಡಿಮೆ ಮಾಡುವುದು ಇದರ ಉದ್ದೇಶ.
ಇದನ್ನು ಓದಿ: ಅನಕೃ ಪ್ರತಿಷ್ಠಾನ: ಎಲ್.ವಿ. ಶಾಂತಕುಮಾರಿ ಮತ್ತು ಆರ್. ಗಣೇಶ್ ಆಯ್ಕೆ — 2024, 2025ನೇ ಸಾಲಿನ ‘ಅನಕೃ ಪ್ರಶಸ್ತಿ’ ಘೋಷಣೆ
ಅದೇ ರೀತಿ, ಕೃಷಿ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳಲ್ಲಿ ₹5,450 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. ಜೊತೆಗೆ ₹815 ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳಿಗೆ ಅಡಿಪಾಯ ಹಾಕಿದರು.
ಉದ್ಘಾಟಿಸಲಾದ ಪ್ರಮುಖ ಯೋಜನೆಗಳಲ್ಲಿ:
- ಬೆಂಗಳೂರು ಮತ್ತು ಜಮ್ಮು-ಕಾಶ್ಮೀರದಲ್ಲಿ ಕೃತಕ ಗರ್ಭಧಾರಣೆಯ ತರಬೇತಿ ಕೇಂದ್ರಗಳು
- ಅಮ್ರೇಲಿ ಮತ್ತು ಬನಾಸ್ನಲ್ಲಿ ಶ್ರೇಷ್ಠತಾ ಕೇಂದ್ರಗಳು
- ಅಸ್ಸಾಂನಲ್ಲಿ ಐವಿಎಫ್ ಲ್ಯಾಬ್ (ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ)
- ಇಂದೋರ್, ಮೆಹ್ಸಾನಾ ಮತ್ತು ಭಿಲ್ವಾರಾದಲ್ಲಿ ಹಾಲಿನ ಪುಡಿ ಘಟಕಗಳು
- ಅಸ್ಸಾಂನ ತೇಜ್ಪುರದಲ್ಲಿ ಮೀನು ಆಹಾರ ಘಟಕ (ಮತ್ಸ್ಯ ಸಂಪದ ಯೋಜನೆಯಡಿ)
- ಕೃಷಿ ಸಂಸ್ಕರಣಾ ಕ್ಲಸ್ಟರ್ಗಳಿಗೆ ಶೀತಲ ಸರಪಳಿ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯ
ಈ ಯೋಜನೆಗಳಿಂದ ದೇಶದ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ, ಸಂಗ್ರಹಣೆ ಹಾಗೂ ಮೌಲ್ಯವರ್ಧನೆಗೆ ಹೊಸ ವೇಗ ದೊರಕಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ಇದನ್ನು ಓದಿ- *ಹಾಸನಾಂಬ ದರ್ಶನದಲ್ಲಿ ಗಲಾಟೆ- * ಭಕ್ತರು ಮತ್ತು ಪೊಲೀಸ್ ಸಿಬ್ಬಂದಿ ನಡುವೆ ಗಲಾಟೆ *

[…] […]