ದೇಶದ ರೈತರಿಗೆ ಸುವಾರ್ತೆ: ‘ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ’ಗೆ ಪ್ರಧಾನಿ ಮೋದಿ ಚಾಲನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ₹35,440 ಕೋಟಿ ರೂ. ವೆಚ್ಚದ ಎರಡು ಪ್ರಮುಖ ಕೃಷಿ ಯೋಜನೆಗಳಿಗೆ ಚಾಲನೆ ನೀಡಿದರು. ₹24,000 ಕೋಟಿಯ ‘ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ’ ಮತ್ತು ₹11,440 ಕೋಟಿಯ ದ್ವಿದಳ ಧಾನ್ಯ ಆತ್ಮನಿರ್ಭರತಾ ಮಿಷನ್ ಮೂಲಕ ಕೃಷಿ ಉತ್ಪಾದನೆ, ಸಂಗ್ರಹಣೆ, ನೀರಾವರಿ ಮತ್ತು ಮೌಲ್ಯವರ್ಧನೆಗೆ ಉತ್ತೇಜನ.