ಸಾಲಗಾರರಿಗೆ RBI ಇಂದ ಶುಭವಾರ್ತೆ: ಬಡ್ಡಿದರ ಶೇ. 0.50 ರಷ್ಟು ಕಡಿತ ಸಾಧ್ಯತೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೀಘ್ರದಲ್ಲೇ ಬಡ್ಡಿದರವನ್ನು ಶೇ. 0.50ರಷ್ಟು ಕಡಿತ ಮಾಡುವ ಸಾಧ್ಯತೆ ಇದ್ದು, ಇದು ಸಾಲಗಾರರಿಗೆ ಮತ್ತೊಂದು ಶುಭವಾರ್ತೆ ಆಗಲಿದೆ. ಈ ನಿರ್ಧಾರದಿಂದ ಗೃಹ, ವಾಹನ ಹಾಗೂ ಇತರ ಸಾಲಗಳ ಮೇಲಿನ ಬಡ್ಡಿದರ ಕಡಿಮೆಯಾಗುವ ಸಾಧ್ಯತೆ ಇದೆ.