ಚನ್ನರಾಯಪಟ್ಟಣ ಪುರಸಭೆ ಗಲಾಟೆಗೆ ಗೋಪಾಲಸ್ವಾಮಿ ಬೆಂಬಲಿಗರು ಕಾರಣ: ಪುರಸಭೆ ಅಧ್ಯಕ್ಷ ಸಿ.ಎನ್. ಮೋಹನ್ ಕುಮಾರ್ ಆರೋಪ

ಚನ್ನರಾಯಪಟ್ಟಣ ಪುರಸಭೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಭೇಟಿ ಸಂದರ್ಭದಲ್ಲಿ ನಡೆದ ಗಲಾಟೆಗೆ ಗೋಪಾಲಸ್ವಾಮಿ ಮತ್ತು ಅವರ ಬೆಂಬಲಿಗರು ಕಾರಣ ಎಂದು ಪುರಸಭೆ ಅಧ್ಯಕ್ಷ ಸಿ.ಎನ್. ಮೋಹನ್ ಕುಮಾರ್ ಆರೋಪಿಸಿದ್ದಾರೆ. ಹಲ್ಲೆ ಹಾಗೂ ಬೀಗ ಒಡೆದು ದಾಂಧಲೆ ಸೃಷ್ಟಿಸಿದ ಘಟನೆ ಸಂಬಂಧಿಸಿ ಪೊಲೀಸರು ಹಾಗೂ ಡಿಸಿಗಳಿಗೆ ದೂರು ಸಲ್ಲಿಸಲಾಗಿದೆ.