ಬೆಂಗಳೂರು: ಸರ್ಕಾರಿ ಆದೇಶ, ಸುತ್ತೋಲೆ, ಯೋಜನೆ ಹಾಗೂ ವಿವಿಧ ಸೇವೆಗಳ ಕುರಿತು ಜನರಿಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಇದಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ನೆರವು ಪಡೆಯಲು ಮುಂದಾಗಿದೆ.
ಬಹುತೇಕ ಸರ್ಕಾರಿ ಇಲಾಖೆಗಳು, ವಿಶೇಷವಾಗಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಹನ ನಡೆಸುವ ಇಲಾಖೆಗಳು, ಕಾಲಕಾಲಕ್ಕೆ ಸರ್ಕಾರಿ ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳು ಮತ್ತು ಇತರ ದಾಖಲೆಗಳನ್ನು ನೀಡುತ್ತಲೇ ಇರುತ್ತವೆ. ಇವುಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ಮುಂದಾಗಿದೆ.
ಆರಂಭಿಕ ಯೋಜನೆಯಾಗಿ ಇ-ಆಡಳಿತ ಕೇಂದ್ರ (ಸಿಇಜಿ) ಕಂದಾಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ನಾಲ್ಕರಿಂದ ಐದು ಇಲಾಖೆಗಳನ್ನು ಆಯ್ಕೆ ಮಾಡಿದ್ದು. ಎಐ ನೆರವಿನ ಮೂಲಕ ಈ ಇಲಾಖೆಗಳ ಸುತ್ತೋಲೆ. ಆದೇಶ ಹಾಗೂ ಇತರೆ ಮಾಹಿತಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.
ಸಿಇಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಶಶಿ ಅವರು ಮಾತನಾಡಿ, ಈ ದಾಖಲೆಗಳನ್ನು ಪ್ರತಿಯೊಂದು ಇಲಾಖೆಯ ವೆಬ್ಸೈಟ್ನಲ್ಲಿ ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಬಹುದು ಎಂದು ಹೇಳಿದ್ದಾರೆ.
