ಕೆ.ಆರ್.ಪೇಟೆ. ಬಹುತೇಕ ಪೋಷಕರಲ್ಲಿ ಸರ್ಕಾರಿ ಶಾಲೆಗಳು ಎಂದರೆ ಕೀಳರಿಮೆ ಇರುವ ಪ್ರಸ್ತುತ ದಿನಮಾನಗಳಲ್ಲಿ ಹಿರೀಕಳಲೆ ಸರ್ಕಾರಿ ಶಾಲೆ ಗುಣಮಟ್ಟದ ಶಿಕ್ಷಣದ ಜೊತೆಗೆ ನಮ್ಮ ಪಾರಂಪರಿಕ ಪೌರಾಣಿಕ ನಾಟಕಗಳು ಜೀವನದ ಪ್ರತಿಬಿಂಬವಾಗಿದ್ದು ಮಕ್ಕಳು ಶಾಲಾ ಹಂತದಲ್ಲಿ ನಮ್ಮ ಸಂಸ್ಕೃತಿ ಉಳಿಸಿ ನಾಟಕದಲ್ಲಿ ಬರುವ ಉತ್ತಮ ಪಾತ್ರಧಾರಿಗಳ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಭಿವೃದ್ಧಿಯತ್ತ ಸಾಗಲಿ ಎಂದು ಮಕ್ಕಳ ಕೈಯಲ್ಲಿ ಪೌರಾಣಿಕ ನಾಟಕ ಪ್ರದರ್ಶನ ಮಾಡಿರುವುದು ನಿಜಕ್ಕೂ ಸಾಧನೆ ಜೊತೆಗೆ ಶ್ಲಾಘನೀಯ ವಿಚಾರ ಎಂದು ಸಮಾಜ ಸೇವಕ ಆರ್ ಟಿ ಮಲ್ಲಿಕಾರ್ಜುನ್ ತಿಳಿಸಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಹಿರೀಕಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಗ್ರಾಮದ ಶ್ರೀ ಬಸವೇಶ್ವರ ಕೃಪಪೋಷಿತ ನಾಟಕ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಗ್ರಾಮದ ಶಾಲಾ ಮಕ್ಕಳ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕಕ್ಕೆ ಉದ್ಘಾಟಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗ್ರಾಮಸ್ಥರ ಸಹಕಾರ ಪೋಷಕರ ಇಚ್ಛಾ ಶಕ್ತಿ ಇದ್ದರೆ ಮಾತ್ರ ಇಂತಹ ಅಪರೂಪದ ಕಾರ್ಯಕ್ರಮ ಕೈಗೊಳ್ಳಲು ಸಾಧ್ಯ ಮಕ್ಕಳಿಂದ ಪೌರಾಣಿಕ ನಾಟಕ ಮಾಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಕಲೆ, ನಾಟ್ಯ, ಸಂಸ್ಕೃತಿ, ಸಾಹಿತ್ಯ, ಜಾನಪದ ಸಾಹಿತ್ಯ, ನಾಟಕ ಸಾಹಿತ್ಯ, ಎಲ್ಲವೂ ಕೂಡ ಈ ತಂತ್ರಜ್ಞಾನದ ಯುಗದಲ್ಲಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಹಿರೀಕಳಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುರುಕ್ಷೇತ್ರ ಅಥವಾ ಧರ್ಮದ ರಾಜ್ಯ ಸ್ಥಾಪನೆ ಎಂಬ ಸುಂದರ ಪೌರಾಣಿಕ ನಾಟಕವನ್ನು ಪ್ರದರ್ಶನ ಮಾಡುತ್ತಿರುವುದು ಸಂತಸ ತಂದಿದೆ ಎಂದ ಅವರು ಸರ್ಕಾರಿ ಶಾಲೆಗಳ ಬಗ್ಗೆ ಆಸಕ್ತಿ ಹೊಂದಿ, ಸರ್ಕಾರಿ ಶಾಲೆಗಳ ಬಲವರ್ಧನೆ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಉತ್ತಮವಾದ ಶಿಕ್ಷಣವನ್ನು ನೀಡುತ್ತದೆ. ಶಿಕ್ಷಣ ಎಂದರೆ ಬರೀ ಪಾಠ ಬೋಧನೆ ಅಲ್ಲ. ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕೂಡ ನಮ್ಮ ಸರ್ಕಾರಿ ಶಾಲೆಗಳು ಮೇಲುಗೈ ಸಾಧಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ
ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾರ ಸಂಸ್ಕೃತಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳನ್ನು ಹಾಗೂ ಜಾನಪದ ಕಲೆಗಳನ್ನು ಹೊರ ತೆಗೆಯುವ ಕೆಲಸವನ್ನು ಸರ್ಕಾರಿ ಶಾಲೆಗಳು ಮಾಡುತ್ತಿವೆ.ಗ್ರಾಮೀಣ ಪ್ರತಿಭೆಗಳನ್ನು ಗ್ರಾಮಸ್ಥರು ಮತ್ತು ಶಿಕ್ಷಕರು ಅನಾವರಣ ಮಾಡುತ್ತಿರುವುದು ಮಾದರಿಯಾಗಿದೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದೇ ರಂಗದಲ್ಲೂ ಕಡಿಮೆ ಇಲ್ಲ. ದಯವಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಮನವಿ ಮಾಡಿದರು.

ಶಾಲಾ ವಾರ್ಷಿಕೋತ್ಸವಕ್ಕೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ವಿಶೇಷವಾಗಿ ಸತತ ಎರಡು ತಿಂಗಳಿಂದ ಪ್ರತಿ ಶನಿವಾರ ಭಾನುವಾರ ಪೌರಾಣಿಕ ನಾಟಕವನ್ನು ಕಲಿತು ಗ್ರಾಮದ ವೇದಿಕೆಯಲ್ಲಿ ಅದ್ದೂರಿಯಾಗಿ ಪ್ರದರ್ಶಿಸಿದರು.ಕುರುಕ್ಷೇತ್ರ ಆಧಾರಿತ ಪೌರಾಣಿಕ ನಾಟಕವನ್ನು ಪುಟಾಣಿ ಮಕ್ಕಳು ಅದ್ಭುತವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.ಮಕ್ಕಳ ಅದ್ಭುತ ಅಭಿನಯವನ್ನು ಕಂಡ ಪೋಷಕರು ಹಾಗೂ ಊರಿನ ಜನರು ಮೂಕ ವಿಸ್ಮಿತರಾಗಿ ಶಿಳ್ಳೆ, ಚಪ್ಪಾಳೆ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷ ಡ್ರಾಮಾ ಸೀನರಿ ಹಾಗೂ ವೇಷಭೂಷಣದೊಂದಿಗೆ ಮಕ್ಕಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ಪೌರಾಣಿಕ ನಾಟಕದಲ್ಲಿ ತಮ್ಮ ಮಕ್ಕಳ ಅದ್ಭುತವಾದ ಅಭಿನಯವನ್ನು ಕಂಡ ಪೋಷಕರು ಸಂಭ್ರಮಗೊಂಡರು. ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳ ಕೈಯಲ್ಲಿ ಪೌರಾಣಿಕ ನಾಟಕ ಮಾಡಿಸಿ ವೇದಿಕೆಗೆ ತಂದುಕೊಟ್ಟಿದ್ದು ಪೋಷಕರಿಂದಲೇ ಪುಟಾಣಿ ಮಕ್ಕಳು ಚಪ್ಪಾಳೆ ಗಿಟ್ಟಿಸಿ ಬೆನ್ನು ತಟ್ಟಿಸಿಕೊಂಡರು. ಮಕ್ಕಳ ಪೌರಾಣಿಕ ನೋಡಲು ಜನಸ್ತೋಮವೇ ಹರಿದು ಬಂದಿತ್ತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಹೆಚ್.ಎಂ ರಾಮೇಗೌಡ, ನಾಗರಾಜು, ರಾಮಕೃಷ್ಣ,ಕೃಷ್ಣೆಗೌಡ,
ಮಂಜೇಗೌಡ,ಕಾಳೆಗೌಡ,ಮರ್ಗೋನಹಳ್ಳಿ ನಿಂಗೇಗೌಡ, ಸುಬ್ಬೆಗೌಡ,ಗ್ರಾ.ಪಂ ಸದಸ್ಯರಾದ ಮಂಜುನಾಥ ಪೂರ್ಣಿಮಾ, ಜಯರಾಮ,ಕಾಂತರಾಜು,ಡೈರಿ ಅಧ್ಯಕ್ಷ ನವೀನ್, ಗವಿಗೌಡ,ಕಿಕ್ಕೇರಗೌಡ, ಎಲ್ಐಸಿ ರವಿ, ಬಸವರಾಜು ಸೊಸೈಟಿ ನಿರ್ದೇಶಕ ಬಲರಾಮ್ ಸ್ಬಿಐ ಗಣೇಶ್ ಕೃಷ್ಣೇಗೌಡ ಶಿಕ್ಷಕ ಹೇಮಂತ್ ಅಣ್ಣಚಾಕನಹಳ್ಳಿ ರೂಪ ಮಹೇಶ್, ಕೇಶವ,ಪೂಜಾರಿ ದೇವರಾಜು, ಶಿಕ್ಷಕ ಬೋರಲಿಂಗ ನಾಯಕ,ಮಹಾಲಿಂಗಯ್ಯ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಟ್ರಸ್ಟ್ ಮಧುಕರಣ್,ರಾಜೇಶ್, ಪ್ರದೀಪ್,ಲಕ್ಷೀಶ್,ದರಮೇಶ್,
ಜಯಕೃಷ್ಣ,ಪ್ರದೀಪ್,ದೀಲಿಪ್,ಕೃಷ್ಣೆಗೌಡ,ಶಿವರಾಜ್, ಪ್ರತಿಪ್,ಭರತ್, ಸೇರಿದಂತೆ ಮಕ್ಕಳ ಪೋಷಕರು ಗ್ರಾಮಸ್ಥರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
