ಬೆಂಗಳೂರು, ಜುಲೈ 21: ಸಣ್ಣ ವ್ಯಾಪಾರಿಗಳ ಮೇಲೆ ಜಿಎಸ್ಟಿ ನೋಟಿಸ್ಗಳು ತೆರಿಗೆಯೊತ್ತಡ ಹೆಚ್ಚಿಸುತ್ತಿರುವುದಾಗಿ ಬೆಳವಣಿಗೆ ನಡೆಯುತ್ತಿರುವಂತೆ, ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಇಂದು ಗಂಭೀರ ತಿರುಗೇಟು ನೀಡಿದ್ದಾರೆ.
ಜಿಎಸ್ಟಿ ಮಂಡಳಿ ನಿರ್ಧಾರದ ಹೊಣೆ ರಾಜ್ಯದ ಮೇಲೆ ಹಾಕಬೇಡಿ:
“ಜಿಎಸ್ಟಿ ಕಾನೂನು ಕೇಂದ್ರದ ವ್ಯಾಪ್ತಿಯಲ್ಲಿದೆ. ಜಿಎಸ್ಟಿ ಕೌನ್ಸಿಲ್ಗೂ ಕೇಂದ್ರವೇ ಹೊಣೆ. ರಾಜ್ಯ ಸರ್ಕಾರವನ್ನು ಆರೋಪಿಸುವುದು ಗೂಬೆ ಕೂರಿಸುವದಕ್ಕಿಂತ ಹೆಚ್ಚು ಅಲ್ಲ,” ಎಂದು ಅವರು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ತಿರುಗೇಟು:
“ಮಗುವನ್ನು ಅಳಿಸುತ್ತ ನೀವು, ತೊಟ್ಟಿಲು ತೂಗುವ/drama ಮಾಡುವುದೂ ನೀವು! ಇದು ಎಷ್ಟು ದಿನ?” ಎಂಬ ಹೋಲಿಕೆಯಲ್ಲಿ ಬಿಜೆಪಿ ವಿರುದ್ಧ ತೀಕ್ಷ್ಣವಾಗಿ ಹೇಳಿಕೆ ನೀಡಿದ ಅವರು, “ನಿಮ್ಮ ಆರೋಪಗಳು ಸತ್ಯದಿಂದ ದೂರ. ನಿಜವಾಗಿಯೂ ಸಣ್ಣ ವ್ಯಾಪಾರಿಗಳಿಗೆ ಕಾಳಜಿ ಇದ್ದರೆ, ನೀವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಈ ಸಮಸ್ಯೆ ಪರಿಹರಿಸಬೇಕು,” ಎಂದು ಒತ್ತಾಯಿಸಿದರು.
ಇದನ್ನು ಓದಿ: ಜುಲೈ 25 ರಂದು ರಾಜ್ಯಾದ್ಯಂತ ವರ್ತಕರ ಮುಷ್ಕರ : ಏನಿರುತ್ತೆ..? ಏನಿರಲ್ಲ.! ಇಲ್ಲಿದೆ ಮಾಹಿತಿ
ದಾರಿ ತಪ್ಪಿಸಬೇಡಿ, ಜನರ ನೋವನ್ನು ರಾಜಕೀಯ ಮಾಡಬೇಡಿ:
“ವ್ಯಾಪಾರಿಗಳಿಗೆ ಉಚಿತ ಅಡಿಟರ್ ಸಲಹೆ ನೀಡುತ್ತೇವೆ ಎಂದು ಜಾಹೀರಾತು ಹಾಕಿ ಮಾರ್ಯಾದೆ ಕಳೆದುಕೊಳ್ಳಬೇಡಿ. ನಾಚಿಕೆ, ಮಾನ, ಸತ್ಯ ಎಂಬ ಪದಗಳ ಅರ್ಥ ಅರಿಯಿರಿ,” ಎಂದು ಸಚಿವರು ಹೇಳಿದರು.
ಹೆಚ್ಚುತ್ತಿರುವ ಆತಂಕ:
ರಾಜ್ಯದೆಲ್ಲೆಡೆ ಸಣ್ಣ ವ್ಯಾಪಾರಸ್ಥರು ಯುಪಿಐ ಅಥವಾ ಡಿಜಿಟಲ್ ಪೇಮೆಂಟ್ ಆಧಾರಿತ ವಹಿವಾಟಿಗೆ ಈಗ ಜಿಎಸ್ಟಿ ನೋಟಿಸ್ಗಳು ಬರತೊಡಗಿದ್ದು, ಈ ಮೂಲಕ ವಾಣಿಜ್ಯ ತೆರಿಗೆ ಇಲಾಖೆಯ ಕ್ರಮಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ಈ ಬೆಳವಣಿಗೆಯ ನಡುವೆ ಸರಕಾರದ ಸ್ಪಷ್ಟನೆ ಮಹತ್ವ ಪಡೆದಿದೆ.
