ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಭಾಗ್ಯಗಳಿಗೆ ಬಳಸುವ ಮೂಲಕ ಅಭಿವೃದ್ಧಿ ಪೂರಕವಾದ ಯೋಜನೆಗಳು ಇಲ್ಲದಂತಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಬೇಸರ ವ್ಯಕ್ತಪಡಿಸಿದರು.
ಅವರು ಇಂದು ಸದನದಲ್ಲಿ ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ರವರು ಮಾತನಾಡಿ,ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಾಗಿರುವ ಎಸ್.ಸಿ.ಸ್.ಪಿ/ಟಿ.ಎಸ್.ಪಿ ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಗ್ಯಾರಂಟಿ ಭಾಗ್ಯಗಳಿಗೆ ಬಳಸುವ ಮೂಲಕ ಹಿಂದಿನ ಸರ್ಕಾರ ದಲಿತರ ಉದ್ಧಾರಕ್ಕಾಗಿ ಜಾರಿ ಮಾಡಿದ್ದ ಗಂಗಾ ಕಲ್ಯಾಣ ಯೋಜನೆ, ಐರಾವತ ಯೋಜನೆ ಸೇರಿದಂತೆ ಭೂ ಒಡೆತನ ಯೋಜನೆ ಮುಂತಾದ ಅಭಿವೃದ್ಧಿ ಪೂರಕವಾದ ಯೋಜನೆಗಳು ಇಲ್ಲದಂತಾಗಿದೆ.
ಎಸ್ಸಿ – ಎಸ್ಟಿ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಸರಿಯಾದ ಮೂಲ ಸೌಕರ್ಯಗಳ ಕೊರತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೊರೂರು, ವಾಟೆಹೊಳೆ ಮತ್ತು ಯಗಚಿ ಜಲಾಶಯದ ಯೋಜನಾ ನಿರಾಶ್ರಿತರಿಗೆ ಪುನರ್ವಸತಿಗಾಗಿ ನೀಡಿರುವ ಜಮೀನುಗಳ ದಾಖಲಾತಿಗಳನ್ನು ಇಂದಿಗೂ ಸಹ ನಿರಾಶ್ರಿತ ಕುಟುಂಬಗಳಿಗೆ ಒದಗಿಸಿಲ್ಲ.
ಸಕಲೇಶಪುರ ಆಲೂರು ಕಡ್ಡಾಯ ವಿಧಾನಸಭಾ ಕ್ಷೇತ್ರದಲ್ಲಿಯೇ ಸರಿಸುಮಾರು 30,000 ಎಕರೆಯಷ್ಟು ಜಮೀನನ್ನು ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ.
ಜಮೀನುಗಳನ್ನು ಕಳೆದುಕೊಂಡಿರುವ ಜನರಿಗೆ ಸೂಕ್ತ ರೀತಿಯ ದಾಖಲಾತಿಗಳನ್ನು ಒದಗಿಸಿ ಕೊಡಬೇಕು, ಮನೆ, ಜಮೀನು, ತೋಟದ ಜೊತೆಗೆ ನೂರಾರು ದೇವಾಲಯಗಳು ಸಹ ಮುಳುಗಡೆಯಾಗೆ. ಈ ದೇವಾಲಯಗಳ ಮರು ನಿರ್ಮಾಣವಾಗಬೇಕು.
