ದೆಹಲಿ, ಆಗಸ್ಟ್ 28: ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡು, ಸೆಪ್ಟೆಂಬರ್ 1ರಿಂದ ಬೆಳ್ಳಿ ಆಭರಣಗಳಿಗೂ ಚಿನ್ನದಂತಹ ಹಾಲ್ಮಾರ್ಕ್ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ನಿರ್ಧಾರದ ಪ್ರಮುಖ ಉದ್ದೇಶ, ಗ್ರಾಹಕರು ಖರೀದಿಸುವ ಬೆಳ್ಳಿಯ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವುದು.
ಪ್ರಸ್ತುತ ಹಾಲ್ಮಾರ್ಕ್ ಸ್ವಯಂಪ್ರೇರಿತವಾಗಿದ್ದು, ಗ್ರಾಹಕರು ಬಯಸಿದರೆ ಹಾಲ್ಮಾರ್ಕ್ ಮಾಡಲಾದ ಅಥವಾ ಮಾಡದ ಬೆಳ್ಳಿಯನ್ನ ಖರೀದಿಸಬಹುದು. ಭವಿಷ್ಯದಲ್ಲಿ ಇದು ಕಡ್ಡಾಯವಾಗುವ ಸಾಧ್ಯತೆಗಳಿವೆ ಎಂದು ತಜ್ಞರು ಸೂಚಿಸಿದ್ದಾರೆ. ಹಾಲ್ಮಾರ್ಕ್ ಮಾಡಿದ ಬೆಳ್ಳಿ, ಗುಣಮಟ್ಟದ ಬಗ್ಗೆ ಗ್ರಾಹಕರ ವಿಶ್ವಾಸ ಹೆಚ್ಚಿಸುವುದರಿಂದ ಬೇಡಿಕೆ ಹೆಚ್ಚಬಹುದು.

ಬೇಸಿಕ್ ಹಾಲ್ಮಾರ್ಕ್ ಮಾನದಂಡಗಳು (BIS):
- 800 ಸ್ಟಾಂಪ್: 80% ಬೆಳ್ಳಿ + 20% ಇತರೆ ಲೋಹಗಳು
- 835 ಸ್ಟಾಂಪ್: 83.5% ಶುದ್ಧತೆಯ ಬೆಳ್ಳಿ
- 900 ಸ್ಟಾಂಪ್: 90% ಶುದ್ಧತೆಯ ಬೆಳ್ಳಿ, ನಾಣ್ಯಗಳು ಮತ್ತು ವಿಶೇಷ ಆಭರಣಗಳಲ್ಲಿ ಬಳಸಲಾಗುತ್ತದೆ
- 925 ಸ್ಟಾಂಪ್: ಸ್ಟರ್ಲಿಂಗ್ ಬೆಳ್ಳಿ, 92.5% ಶುದ್ಧತೆ, ಜನಪ್ರಿಯ
- 970 ಸ್ಟಾಂಪ್: 97% ಶುದ್ಧ ಬೆಳ್ಳಿ, ವಿಶೇಷ ಪಾತ್ರೆಗಳು ಮತ್ತು ಡಿಸೈನರ್ ಆಭರಣಗಳಿಗೆ
- 990 ಸ್ಟಾಂಪ್: 99% ಶುದ್ಧತೆ, ಬಾರ್ಗಳು ಮತ್ತು ನಾಣ್ಯ ತಯಾರಿಕೆಗೆ ಬಳಸಲಾಗುತ್ತದೆ
ಈ ಹೊಸ ಮಾನದಂಡಗಳ ಮೂಲಕ ಗ್ರಾಹಕರು ಬೆಳ್ಳಿಯ ಗುಣಮಟ್ಟವನ್ನು ಸುಲಭವಾಗಿ ಗುರುತಿಸಿ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಖರೀದಿ ಮಾಡಬಹುದು.
