ಕೆ.ಆರ್.ಪೇಟೆ: ತಾಲ್ಲೂಕು ಬೂಕನಕೆರೆ ಹೋಬಳಿ ಅಟ್ಟುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ಗ್ರಾಮಸ್ಥರು ಹಾಗೂ ಮಕ್ಕಳು ಸೇರಿ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು
ರಾಗಿ ಭತ್ತ ರಾಶಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಶಿಕ್ಷಕ ಹಳೆಯೂರು ಯೋಗೇಶ್ ಅಟ್ಟುಪ್ಪೆ ಗ್ರಾಮದ ಮುಖಂಡರ ಹಾಗೂ ಎಲ್ಲಾ ಪೋಷಕರ ಸಹಾಯದಿಂದ ಸರ್ಕಾರಿ ಶಾಲೆಯಲ್ಲಿ ಇಂತಹ ಒಳ್ಳೊಳ್ಳೆ ಕಾರ್ಯಕ್ರಮಗಳ ಮಾಡುವುದರ ಮೂಲಕ ಮಕ್ಕಳಿಗೆ ಸಂಕ್ರಾಂತಿ ಹಬ್ಬದ ವಿಶೇಷತೆ ತಿಳಿಸಿ. ರೈತರು ಬೆಳೆದ ದವಸ ಧಾನ್ಯಗಳನ್ನು ಒಕ್ಕಣೆ ಮಾಡಿ ರಾಶಿ ಪೂಜೆ ಮಾಡಿ ಸಂಗ್ರಹಣೆ ,ರಾಸುಗಳ ಕಿಚ್ಚು ಹಾಯಿಸುವುದು, ಹೆಣ್ಣು ಮಕ್ಕಳು ಎಳ್ಳು ಬೆಲ್ಲ ಹಂಚುವುದು, ಪ್ರಕೃತಿ ಪೂಜೆ ಹೀಗೆ ಪ್ರತಿಯೊಂದು ಹಬ್ಬಗಳ ಆಚರಣೆ ವಿಶೇಷತೆ ಬಗ್ಗೆ ಹಾಗೂ ನಮ್ಮ ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.
ಸಂಕ್ರಾಂತಿಯ ಅಂಗವಾಗಿ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.ರಂಗೋಲಿ ಬಿಡಿಸಿ ಚಿತ್ತಾರ ಮೂಡಿಸಲಾಗಿತ್ತು. ಬಾಳೆಕಂದು, ಮಾವಿನ ತೋರಣ, ಕಬ್ಬಿನ ಜಲ್ಲೆ, ತೆಂಗಿನ ಗರಿಗಳು ಹಬ್ಬವನ್ನು ಕಳೆಗಟ್ಟುವಂತೆ ಮಾಡಿದ್ದವು ಗೋ ಪೂಜೆ, ಆಹಾರ ತಯಾರಿಕೆ, ರಾಶಿ ಪೂಜೆಯಂತಹ ಹಾಗೂ ಶಿಕ್ಷಕ ವಿದ್ಯಾರ್ಥಿಗಳ ಜೊತೆಗೆ ಕುಣಿದು ಸುಗ್ಗಿ ಹಬ್ಬದ ಸಡಗರವನ್ನು ಹೆಚ್ಚಿಸಿತ್ತು.
ಸಾಂಪ್ರದಾಯಿಕ ಉಡುಪು ತೊಟ್ಟು ಬಂದಿದ್ದ ವಿದ್ಯಾರ್ಥಿಗಳು ಲಗುಬಗೆಯಿಂದ ಓಡಾಡುತ್ತಿದ್ದರು. ಬಳಿ ಪಂಚೆ, ಬಿಳಿ ಜುಬ್ಬಾ ಧರಿಸಿ ಪರಂಪರೆಯ ಹಿರಿಮೆಯನ್ನು ಸಾರಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಸುರೇಶ್, ಸಂಪನ್ಮೂಲ ವ್ಯಕ್ತಿ ನಾಗೇಂದ್ರ, ಶಾಲಾ ಶಿಕ್ಷಕ ಕೃಷ್ಣ ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರು, ಗ್ರಾಮಸ್ಥರು, ಮಹಿಳಾ ಸಂಘದ ಸದಸ್ಯರು, ಮಕ್ಕಳು ಹಾಗೂ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
-ಮಾಕವಳ್ಳಿ ಕೆ.ಆರ್.ಪೇಟೆ

[…] […]