ಹಾಸನ, ಜೂನ್ 22: ಹೃದಯಾಘಾತದಿಂದ ಯುವ ವಯಸ್ಸಿನವರ ಸಾವಿನ ಸರಣಿ ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವ ಸಂದರ್ಭದಲ್ಲೇ, ಶನಿವಾರ ರಾತ್ರಿ ಮತ್ತೊಂದು ದುಃಖದ ಘಟನೆ ನಡೆದಿದೆ. ಹಾಸನ ನಗರದ ಸತ್ಯಮಂಗಲ ಬಡಾವಣೆಯ ನಿವಾಸಿ, 35 ವರ್ಷದ ಮೊಬೈಲ್ ಅಂಗಡಿ ಮಾಲೀಕ ಚೇತನ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಕಿಕ್ಕೇರಿ ಮೂಲದ ಚೇತನ್ ಅವರು ಹಾಸನದ ಹಳೇ ಬಸ್ ನಿಲ್ದಾಣದ ಬಳಿ ಮೊಬೈಲ್ ಅಂಗಡಿ ನಡೆಸುತ್ತಿದ್ದರು. ಪತ್ನಿ ಹಾಗೂ ಪುಟ್ಟ ಮಗುವಿನೊಂದಿಗೆ ಸತ್ಯಮಂಗಲ ಬಡಾವಣೆಯಲ್ಲಿ ನೆಲೆಸಿದ್ದರು. ಶನಿವಾರ ರಾತ್ರಿ ಊಟಕ್ಕೆ ಕುಳಿತ ವೇಳೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಎದ್ದೇಳುತ್ತಿದ್ದ ವೇಳೆ ಅಚಾನಕ ಕುಸಿದು ಬಿದ್ದರು. ಪತ್ನಿ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರೂ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಯುವಕರ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ವೈದ್ಯಕೀಯ ತಜ್ಞರಲ್ಲಿ ಹಾಗೂ ಸಾರ್ವಜನಿಕರಲ್ಲಿ ಭೀತಿಯನ್ನು ಹುಟ್ಟುಹಾಕಿವೆ.
ಭಾರತೀಯ ಕರಾವಳಿ ಗಾರ್ಡಿನಲ್ಲಿ ನಾವಿಕ್ ಮತ್ತು ಯಂತ್ರಿಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
