ಹಾಸನ : ಕೌಟುಂಬಿಕ ಕಲಹ ಹಿನ್ನಲೆ, ಮನನೊಂದು ನೇಣುಬಿಗಿದುಕೊಂಡು ಮಹಿಳೆ ಆ*ತ್ಮಹ*ತ್ಯೆ ಮಾಡಿಕೊಂಡಂತ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.

ಹರಿಣಾಕ್ಷಿ (40) ಆತ್ಮಹತ್ಯೆಗೆ ಶರಣಾದ ಮಹಿಳೆ. ಹದಿನಾರು ವರ್ಷಗಳ ಹಿಂದ ಲಿಂಗಾಪುರ ಗ್ರಾಮದ ಶೇಖರ್ ಜೊತೆ ವಿವಾಹವಾಗಿದ್ದ ಹರಿಣಾಕ್ಷಿಯನ್ನು ಅನುಮಾನದಿಂದ ನೋಡುತ್ತಿದ್ದ ಪತಿ, ಇದೇ ವಿಚಾರಕ್ಕೆ ದಂಪತಿ ನಡುವೆ ನಡೆಯುತ್ತಿದ್ದ ಜಗಳವನ್ನು ಎರಡು ಕುಟುಂಬಗಳ ಹಿರಿಯರು, ಹಲವು ಬಾರಿ ರಾಜಿ ಸಂಧಾನ ಮಾಡಿದ್ದರು. ಪದೇ ಪದೇ ಈ ಘಟನೆ ಮರುಕಳಿಸಿದ್ದರಿಂದ ಮನನೊಂದಿದ್ದ ಹರಿಣಾಕ್ಷಿ, ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
