ಆಲೂರು, ಜೂನ್ 23: ಪಟ್ಟಣದ ಸೋಮೇಶ್ವರ ಕಾಂಪ್ಲೆಕ್ಸ್ ಸಮೀಪ ಸೋಮವಾರ ಸಂಜೆ 7.30ರ ಸುಮಾರಿಗೆ ಆಲೂರಿನಿಂದ ಮಗ್ಗೆ ಗ್ರಾಮಕ್ಕೆ ಹೋಗುತ್ತಿದ್ದ ಸರ್ಕಾರಿ ಸಾರಿಗೆ ಬಸ್ಸಿನ ಮುಂದಿನ ಎಡಭಾಗದ ಚಕ್ರ ಉಡಿದು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ಕಾರಿಗೆ ಗುದ್ದಿದ ಪರಿಣಾಮ, ಕಾರಿನ ಹಿಂಭಾಗ ಸಂಪೂರ್ಣ ಜಜ್ಜಿ ಹೋಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಸ್ಥಳೀಯರು ನೀಡಿದ ಮಾಹಿತಿಯಂತೆ, ಘಟನೆಯ ವೇಳೆ ಕಾರಿನಲ್ಲಿ ಯಾರೂ ಇಲ್ಲದಿರುವುದು ದೊಡ್ಡ ಅನಾಹುತ ತಪ್ಪಿಸಿದೆ. ಘಟನೆಯ ಬಳಿಕ ಜನರು ಬಸ್ಸುಗಳ ನಿರ್ವಹಣಾ ಗುಣಮಟ್ಟದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸಾರಿಗೆ ಬಸ್ಸುಗಳು ಕ್ರಮೇಣ ಕೆಟ್ಟು ನಿಲ್ಲುತ್ತಿರುವುದು, ಬಿಡಿಭಾಗಗಳು ಸಡಿಲವಾಗಿ ಕಳಚಿ ಹೋಗುತ್ತಿರುವುದು ಸಾಮಾನ್ಯವಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ. “ಈ ರೀತಿಯ ನಿರ್ಲಕ್ಷ್ಯ ಮುಂದುವರೆದರೆ ನಾಳೆ ಮತ್ತೊಂದು ದೊಡ್ಡ ಅಪಘಾತ ನಿರಾಕರಣೆಯಾಗಲಿಕ್ಕಿಲ್ಲ,” ಎಂದು ಸ್ಥಳೀಯರು ಎಚ್ಚರಿಸಿದರು.
ಘಟನೆ ಸಂಬಂಧ ಅಧಿಕೃತ ಪ್ರತಿಕ್ರಿಯೆ ಅಥವಾ ತನಿಖೆಯ ಪ್ರಾರಂಭದ ಕುರಿತು ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
