ಹಾಸನ: ಹಾಸನ ನಗರದಲ್ಲಿಂದು ಮದುವೆಯ ಕೊನೆಯ ಘಟ್ಟದಲ್ಲಿ ಮದುವೆ ಬೇಡ ನಾನು ಬೇರೆಯವರನ್ನು ಪ್ರೀತಿಸುತ್ತಿದ್ದೇನೆ ಎಂದು ಮದುವೆ ಮುರಿದ ವಧು, ಪಲ್ಲವಿ ಎಂಬ ಯುವತಿ ತನ್ನ ಪ್ರಿಯಕರ ರಘು ಜೊತೆ ದೇವಾಲಯದಲ್ಲಿ ಸರಳ ವಿವಾಹವಾಗಿರುವ ಘಟನೆ ಸುದ್ದಿಯಾಗಿದೆ.
ಹಾಸನದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪಕ್ಕೆ ಸಮೀಪದ ಗಣಪತಿ ದೇವಾಲಯದಲ್ಲಿ ಪಲ್ಲವಿ–ರಘು ವಿವಾಹ ಪೋಷಕರ ಸಮ್ಮುಖದಲ್ಲಿ ನೆರವೇರಿತು.
ರಘು ಮೂಲತಃ ಹಾಸನ ತಾಲ್ಲೂಕಿನ ಬಸವನಹಳ್ಳಿ ಗ್ರಾಮದವನಾಗಿದ್ದು, ಪಲ್ಲವಿಯೊಂದಿಗೆ ಉಂಟಾಗಿದ್ದ ಪ್ರೇಮಸಂಬಂಧ ಇದೀಗ ವಿವಾಹದಲ್ಲಿ ಮುಕ್ತಾಯವಾಗಿದೆ. ಮದುವೆ ಸರಳವಾದರೂ ಸಹ, ಇಬ್ಬರ ಕುಟುಂಬಗಳ ಸಮಮತಿಯಿಂದ ವಿವಾಹ ನೆರವೇರಿತು. ಈ ಅನಿರೀಕ್ಷಿತ ತಿರುವು ಹಾಸನದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪ್ರೀತಿಯ ಗೆಲುವಿಗೆ ಮಾದರಿಯಂತಾಗಿದೆ.
