
ಹಾಸನ- ರಾಜ್ಕುಮಾರ್ ಅವರ 50ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಅಂಗವಾಗಿ ಮಾ.17 ರಂದು ಸಾಲಗಾಮೆಯಲ್ಲಿ ಪುನೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಹೇಳಿದರು.
ಅವರು ವಿಚಾರ-ವಿಸ್ತಾರ ದೊಂದಿಗೆ ಮಾತನಾಡಿ, ಕ್ತದಾನ ಶಿಬಿರ, ಹಾಸನದ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣೆ ಮತ್ತು ಅಗತ್ಯ ಇದ್ದವರಿಗೆ ಶಸ್ತ್ರಚಿಕಿತ್ಸೆ ಸಹ ಮಾಡಿಸಲಾಗುವುದು .ಮಧ್ಯಾಹ್ನ ಅನ್ನ ಸಂತರ್ಪಣೆ ಇರಲಿದೆ. ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ನಂತರ ನಾಡಿನ ಖ್ಯಾತ ನಿರೂಪಕ ಮತ್ತು ನಟ ಶಾಮ್ ಅವರು ಅರ್ಪಿಸುವ ಮಿಲನ್ ಮ್ಯೂಸಿಕಲ್ ಸೆಲೆಬ್ರಿಟೀಸ್ ಸ್ಟಾರ್ ನೈಟ್ಸ್ ಇವರಿಂದ ಸಂಗೀತ ಹಾಗೂ ಮನೋರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾಲಗಾಮೆ ಹೋಬಳಿಯ ಗ್ರಾಮಗಳ ಜನರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.