ಹಾಸನ: ಜೂನ್ 21 ರಂದು ತುಮಕೂರಿನಲ್ಲಿ ನಡೆಯುವ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರ ಅಮೃತ ಮಹೋತ್ಸವ ಹಾಗೂ ಗ್ರಂಥ ಬಿಡುಗಡೆಯ ಹಿನ್ನಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ರಾಜಣ್ಣರವರ ಪುತ್ರ ರವಿಂದ್ರ ಅಧ್ಯಕ್ಷತೆಯಲ್ಲಿ ಕಾಂಗ್ರಸ್ ಮುಖಂಡರ ಜೊತೆ ಸಭೆ ಸೇರಿ ಸಲಹೆ ಪಡೆದು ಚರ್ಚಿಸಿದರು.
ನಂತರ ಪುತ್ರ ರವೀಂದ್ರ ಅವರು ಮಾತನಾಡಿ, ನಮ್ಮ ತಂದೆಯವರು ಹಾಗೂ ಸಚಿವರಾದ ಕೆ.ಎನ್. ರಾಜಣ್ಣ ಅವರ ಅಮೃತ ಮಹೋತ್ಸವ ಹಾಗೂ ಗ್ರಂಥ ಬಿಡುಗಡೆಯ ಬಗ್ಗೆ ಒಂದು ಪೂರ್ವಭಾವಿ ಸಭೆ ಕರೆದು ಚರ್ಚೆ ಮಾಡಲಾಗಿದೆ. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಜಾತ್ಯಾತೀತವಾಗಿ, ಪಕ್ಷತೀತವಾಗಿ ಎಲ್ಲಾರನ್ನು ಜೂನ್ 21 ರಂದು ನಡೆಯುವ ಈ ಅಮೃತ ಮಹೋತ್ಸವದಲ್ಲಿ ಆಹ್ವಾನ ಮಾಡುತ್ತೇವೆ. ಈ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ಸಂಸದರಾದ ಶ್ರೇಯಸ್ ಎಂ. ಪಟೇಲ್ ಮಾಧ್ಯಮದೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣರವರ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ಅವರು ಸಾಗಿ ಬಂದಂತಹ ಗ್ರಂಥ ಬಿಡುಗಡೆ ಕಾರ್ಯಕ್ರವನ್ನು ಇದೆ ತಿಂಗಳು ಜೂನ್ 21ರ ಶನಿವಾರದಂದು ತುಮಕೂರು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ನಮ್ಮ ಜಿಲ್ಲೆಯಿಂದ 10 ಸಾವಿರ ಜನರು ಪ್ರಯಾಣ ಬೆಳೆಸಲಿದ್ದಾರೆ. ಈ ಕಾರ್ಯಕ್ರಮವನ್ನು ಪಕ್ಷದಿಂದ ಬಿಂಬಿಸುತ್ತಿಲ್ಲ. ಪಕ್ಷತೀತವಾಗಿ ಭಾಗವಹಿಸಲಿದ್ದಾರೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದರು. ಜಿಲ್ಲಾ ಮಂತ್ರಿ ರಾಜಣ್ಣ ಎಂದರೇ ಯಾವುದೇ ಧ್ವೇಷವನ್ನಿಟ್ಟುಕೊಳ್ಳದ ಒಳ್ಳೆಯ ವ್ಯಕ್ತಿತ್ವವ ಉಳ್ಳವರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಸರಕಾರವು ತಮಗೆ ನೀಡಿದ ಜವಬ್ಧಾರಿಯನ್ನು ಉತ್ತಮವಾಗಿ ನಡೆಸಿಕೊಂಡು ಬಂದಿರುವ ಜಿಲ್ಲಾ ಉಸ್ತವಾರಿ ಸಚಿವ ಕೆ.ಎನ್. ರಾಜಣ್ಣ ಅವರಿಗೆ ದೇವರು ಸುರ್ಧೀರ್ಘ ಆಯಸ್ಸು ಕೊಡಲಿ. ರಾಜಕಾರಣಕ್ಕೆ ಬಂದು 75 ವರ್ಷಗಳ ಕಾಲ ಪೂರೈಸುತ್ತಿದ್ದಾರೆ. ಇನ್ನು 25 ವರ್ಷಗಳು ಅವರಿಗೆ ದೇವರು ಆಯಾಸ್ಸು ಕೊಡಲಿ. ಜಿಲ್ಲಾ ಮಂತ್ರಿಯಾಗಿ ಸ್ಪಂದಿಸಿದ್ದಾರೆ. ಅವರ ಅಭಿಮಾನಕ್ಕೊಸ್ಕರ ನಾವುಗಳು ಭಾಗಿಯಾಗುತ್ತಿದ್ದೇವೆ ಎಂದರು.

ವಿಧಾನ ಪರಿಷತ್ತು ಮಾಜಿ ಸದಸ್ಯ ಗೋಪಾಲಸ್ವಾಮಿ ಮಾತನಾಡಿ, ಇದೆ ಶನಿವಾರದಂದು ನಡೆಯುವ ಸಮಾರಂಭದ ಯಶಸ್ವಿಗೆ ನಾವುಗಳೆಲ್ಲಾ ಕೈಜೋಡಿಸಬೇಕಾಗಿದೆ. ಕಾಂಗ್ರೆಸ್ ಎಲ್ಲಾ ಮುಖಂಡರುಗಳು ಅಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರ ಪುತ್ರ ಕೂಡ ರಾಜಕೀಯಕ್ಕೆ ಬರಲಿ ಎಂದು ಹಾರೈಸಿದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಮಹೇಶ್, ಮಾಜಿ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ತಾರಚಂದನ್, ಮಲ್ಲಿಗೆವಾಳ್ ದೇವಪ್ಪ, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಎ. ವಿಜಯಕುಮಾರ್, ಹುಡಾ ಮಾಜಿ ಅಧ್ಯಕ್ಷ ಕೃಷ್ಣಕುಮಾರ್, ಪಕ್ಷದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ, ಇತರರು ಉಪಸ್ಥಿತರಿದ್ದರು.
