ಹಾಸನ: ಕಳಪೆ ಜೋಳದ ಬೀಜ ನೀಡಿದ ನಕಲಿ ಕಂಪನಿಗಳ ವಿರುದ್ಧ ರೈತರ ಘೋಷಣಾ ಪ್ರತಿಭಟನೆ

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ನಕಲಿ ಕಂಪನಿಗಳ ಪ್ರತಿಕೃತಿಯನ್ನು ಹೆಗಲು ಮೇಲೆ ಹೊತ್ತು ಹೊರಟ ಪ್ರತಿಭಟನಾ ಮೆರವಣಿಗೆ ಎನ್.ಆರ್.ವೃತ್ತ, ಬಿ.ಎಂ. ರಸ್ತೆ ಮೂಲಕ ಸಂತೆಪೇಟೆ ವೃತ್ತ ತಲುಪಿತು. ಇಲ್ಲಿ ಮಾನವ ಸರಪಳಿ ರಚಿಸಿ ಪ್ರತಿಕೃತಿ ಸುಡಲಾಯಿತು.