ಚನ್ನರಾಯಪಟ್ಟಣ ತಾಲ್ಲೂಕಿನ ಬೇಡಿಗನಹಳ್ಳಿ ಗ್ರಾಮದಲ್ಲಿ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.
ಕಬ್ಬು ಕಟಾವು ಮಾಡುತ್ತಿದ್ದ ರೈತ ಚೆಲುವೇಗೌಡ ಅವರ ಕಣ್ಣಿಗೆ ಗದ್ದೆಯಲ್ಲಿ ಮೂರು ಚಿಕ್ಕ ಚಿರತೆ ಮರಿಗಳು ಬಿದ್ದವು.ಅವರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಪರಿಣಾಮ, ತಾಯಿ ಚಿರತೆಯ ಮಡಿಲಿಗೆ ಮರಿಗಳನ್ನು ಸುರಕ್ಷಿತವಾಗಿ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.
ಡಿಎಫ್ಓ ಸೌರಭ್ಕುಮಾರ್ ಹಾಗೂ ಡಿಆರ್ಎಫ್ಓ ಶಂಕರ್ ನೇತೃತ್ವದ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿ ವಿಶೇಷ ಕಾರ್ಯಾಚರಣೆ ಆರಂಭಿಸಿತು. ಮೊದಲ ರಾತ್ರಿ ಪೆಟ್ಟಿಗೆಯಲ್ಲಿ ಇರಿಸಿದ ಮರಿಗಳಲ್ಲಿ ಒಂದನ್ನು ತಾಯಿ ಚಿರತೆ ಕಚ್ಚಿಕೊಂಡು ಕಾಡಿನತ್ತ ತೆರಳಿತು. ಉಳಿದ ಮರಿಗಳನ್ನು ಹಾಲುಣಿಸಿ ಆರೈಕೆ ಮಾಡಿದ ಬಳಿಕ ಎರಡನೇ ರಾತ್ರಿ ಎರಡನೇ ಮರಿಯನ್ನೂ ತಾಯಿಯು ಕರೆದುಕೊಂಡು ಹೋಯಿತು.
ಕೊನೆಗೆ ಮೂರನೇ ಮರಿಯನ್ನೂ ತಾಯಿಯ ಮಡಿಲಿಗೆ ಸೇರಿಸಲು ಡಿಎಫ್ಓ ಸೌರಭ್ಕುಮಾರ್ ಪಣತೊಟ್ಟು ಭದ್ರಾ ಅರಣ್ಯದಿಂದ ಶ್ವಾನದಳವನ್ನು ಕರೆಸಿ ಚಿರತೆ ಹೆಜ್ಜೆ ಗುರುತು ಪತ್ತೆಹಚ್ಚಿದರು. ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ತಾಯಿ ಚಿರತೆ ತನ್ನ ಎರಡು ಮರಿಗಳೊಡನೆ ಇರುವ ದೃಶ್ಯ ಥರ್ಮಲ್ ಡ್ರೋಣ್ ಮೂಲಕ ದೃಢಪಡಿಸಲಾಯಿತು. ನಂತರ ಮೂರನೇ ಮರಿಯನ್ನು ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಮರಿ ಕೂಗುವ ಶಬ್ದ ಕೇಳಿ ಬಂದ ತಾಯಿ ಚಿರತೆ ಪೆಟ್ಟಿಗೆಯ ತುಂಡನ್ನು ಕಾಲಿನಿಂದ ಎಳೆದು ತನ್ನ ಮೂರನೇ ಮಗುವನ್ನೂ ಕಚ್ಚಿಕೊಂಡು ಕಾಡಿನತ್ತ ತೆರಳಿತು.
ಇದೆ ವೇಳೆ, ಎರಡು ಗಂಡು ಹಾಗೂ ಒಂದು ಹೆಣ್ಣು ಚಿರತೆ ಮರಿಯನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಅರಣ್ಯ ಅಧಿಕಾರಿಗಳ ತಾಳ್ಮೆ, ಪ್ರಜ್ಞೆ ಹಾಗೂ ಕಾಡು ಪ್ರಾಣಿಗಳ ಮೇಲಿನ ಮಮತೆ ಈ ಘಟನೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

[…] […]