ಹಾಸನ, ನವೆಂಬರ್ 10: ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜೆ.ಆರ್. ಕೆಂಚೇಗೌಡ ಅವರ ನೇತೃತ್ವದ ತಂಡವು ಗೆಲುವು ಸಾಧಿಸಿದೆ. ಜೆ.ಆರ್. ಕೆಂಚೇಗೌಡರು ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ಅವರಿಗೆ 201 ಮತಗಳು ಲಭ್ಯವಾಯಿತು.
ಉಪಾಧ್ಯಕ್ಷರಾಗಿ ಎನ್. ನಂಜುಂಡೇಗೌಡ (225 ಮತ), ಜಿ. ಪ್ರಕಾಶ್ (221 ಮತ) ಮತ್ತು ಮೋಹನ್ ಕುಮಾರ್ (114 ಮತ) ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಜಿ. ಸುರೇಶ್ (170 ಮತ) ಗೆಲುವು ಸಾಧಿಸಿದ್ದಾರೆ.
ಕಾರ್ಯದರ್ಶಿಗಳಾಗಿ ಬೊಮ್ಮೇಗೌಡ (210 ಮತ), ಸುವರ್ಣ ಹರೀಶ್ (178 ಮತ) ಮತ್ತು ಖುಶ್ವಂತ್ (188 ಮತ) ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಟಿವಿ5 ಚಾನೆಲ್ನ ವರದಿಗಾರ ಪ್ರಕಾಶ್ (189 ಮತ) ಆಯ್ಕೆಯಾಗಿದ್ದಾರೆ. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆಪಿಎಸ್ ಪ್ರಮೋದ್ (175 ಮತ) ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವ ಸದಸ್ಯರು: ಇಬ್ಬೀಡು ಕೃಷ್ಣಮೂರ್ತಿ, ಜಗದೀಶ್ ಸಿ.ಆರ್., ನವೀನ್ ಸಿ.ಆರ್., ನಾಗರಾಜ್ ಹೆಚ್.ಎ., ಪ್ರತಾಪ್ ಹೆಚ್.ಜಿ., ಪ್ರಸನ್ನಕುಮಾರ್ (ಚಲಂ), ಮಲ್ಲೇಶ್ ಬೇಲೂರು, ರಾಘವೇಂದ್ರ ಹೆಚ್.ವಿ., ವಿರೂಪಾಕ್ಷ ಪಿ.ಬಿ., ವಿಶ್ವನಾಥ್ ಎನ್.ಆರ್., ಶರಣ್ ಜಿ., ಶರತ್ ಹೆಚ್.ಆರ್., ಸುರೇಶ್ ಕುಮಾರ್ ಹೆಚ್.ವಿ., ಸ್ವಾಗತ್ ಎಂ.ಎನ್. ಮತ್ತು ಸ್ವರೂಪ್ ಎಂ.ಜಿ.

[…] […]