ಹಾಸನ-ಬೆಂಗಳೂರು ಕಾಲ್ತುಳಿತ ದುರಂತ: ಸರ್ಕಾರದ ನಿರ್ಲಕ್ಷ್ಯವೇ ಕಾರಣ, ದಯಾನಂದ್ ಅಮಾನತು ತಪ್ಪು ನಿರ್ಧಾರ – ಮಾಜಿ ಸಚಿವ ಎಚ್.ಡಿ. ರೇವಣ್ಣ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸರ್ಕಾರದ ಆಯೋಜನೆಯಲ್ಲಿ ಮುನ್ನೆಚ್ಚರಿಕೆಯ ಕೊರತೆ ಕಾರಣ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ. ಬೆಂಗಳೂರು ಕಮಿಷನರ್ ದಯಾನಂದ್ ಅಮಾನತು ತೀವ್ರ ದುಃಖ ತಂದಿದ್ದು, 25 ಲಕ್ಷ ಪರಿಹಾರಕ್ಕಿಂತ ಹೆಚ್ಚಾಗಿ 50 ಲಕ್ಷ ಪರಿಹಾರ ನೀಡಬೇಕು ಎಂಬ ಆಗ್ರಹವನ್ನೂ ಮುಂದಿಟ್ಟಿದ್ದಾರೆ.