ಹಾಸನ: ಕೆಡಿಪಿ ತ್ರೈಮಾಸಿಕ ಸಭೆ – ಶಾಸಕರಿಂದ ಇಲಾಖೆಗಳಿಗೆ ಕಠಿಣ ತಾಕೀತು

ಹಾಸನದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಯಿತು. ಕೆಲವೆಡೆ ಪ್ರಗತಿಯಲ್ಲಿ ವಿಳಂಬವಿರುವುದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯ ಪರಿಸರ ದಿನಾಚರಣೆ ಉಲ್ಲೇಖಿಸಿ ಪ್ರಶ್ನಿಸಿದರು. ಸಸಿ ನೆಡುವ ಖರ್ಚು, ಪೂರ್ವದ ಯೋಜನೆಗಳನ್ನು ಪ್ರಸ್ತುತದಂತೆ ತೋರಿಸುವ ಬಗ್ಗೆ ಕೂಡ ಗಮನಹರಿಸಿದರು.