ಹಾಸನ: ಬಸವಾಘಟ್ಟ ಕ್ಲಸ್ಟರ್ ವತಿಯಿಂದ ಹೊನ್ನಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನ್ನಾಡುತ್ತಾ ಕಲಿಕೆಯ ಕಾಟಿಣ್ಯತೆಯನ್ನು ಸುಲಭೀಕರಿಸಿ ವಿದ್ಯಾರ್ಥಿಗಳಿಗೆ ಕಲಿಸಲು ಎಫ್ ಎಲ್ ಎನ್, ಎಲ್ ಬಿ ಎ ಎಂಬಂತಹ ಇಲಾಖಾ ಯೋಜನೆಗಳಿಂದ ಕಲಿಕಾ ಮಟ್ಟವನ್ನು ಸುಧಾರಿಸುವುದರೊಂದಿಗೆ ಸಂತಸದಾಯಕ ಕಲಿಕಾ ವಾತಾವರಣ ಸೃಷ್ಟಿಯಾಗುತ್ತಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಇಲಾಖಾಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಇವರೊಂದಿಗೆ ಸಮುದಾಯದ ಸಹಭಾಗಿತ್ವ ಮತ್ತು ಸಹಕಾರ ಅತ್ಯಮೂಲ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದುದ್ದ ಹೋಬಳಿ ಶಿಕ್ಷಣ ಸಂಯೋಜಕರಾದ ಭಾರತಿ ಮಾತನ್ನಾಡುತ್ತಾ ಕಲಿಕಾ ಕೊರತೆಯನ್ನು ನೀಗಿಸುವ ಸಲುವಾಗಿ ಕಲಿಕಾ ಹಬ್ಬವನ್ನು ಆಚರಿಸುತ್ತಿದ್ದು ಆನಂದದಾಯಕ ಕಲಿಕೆ,ವಿದ್ಯಾರ್ಥಿಗಳಲ್ಲಿ ವಿಮರ್ಷಾತ್ಮಕ ಚಿಂತನೆ ಆತ್ಮ ವಿಶ್ವಾಸ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸುವುದು ಕಲಿಕಾ ಹಬ್ಬದ ಮೂಲೋದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಸವಾಘಟ್ಟ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಪಿ ಹೆಚ್ ಪುಷ್ಪ ಮಾತನ್ನಾಡುತ್ತಾ ಮಕ್ಕಳನ್ನು ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಅವರಲ್ಲಿನ ಪ್ರತಿಭೆಯನ್ನು ಹೊರತರಲು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವ ವಿನೂತನ ಕಾರ್ಯಕ್ರಮವಾಗಿದೆ ಎಂದು ನುಡಿದರು.

ಸಮುದಾಯ ಸಂಪನ್ಮೂಲ ವ್ಯಕ್ತಿ ಶಾಂತ ಲಕ್ಷ್ಮಿ ಮಾತನ್ನಾಡುತ್ತಾ ಕಥೆ ಹೇಳುವುದು,ಸಂತೋಷದಾಯಕ ಗಣಿತ,ಕೈ ಬರಹ ಮತ್ತು ಕ್ಯಾಲಿಗ್ರಾಫಿ,ಚಿತ್ರ ನೋಡಿ ವಿವರಿಸು, ಛದ್ಮ ವೇಷ,ರಸಪ್ರಶ್ನೆ ಮತ್ತು ಜ್ಞಾಪಕ ಶಕ್ತಿಯ ಆಟಗಳು,ಟ್ರೇಶರ್ ಹಂಟ್, ಗಟ್ಟಿಯಾಗಿ ಓದುವುದು,ತಂತ್ರಜ್ಞಾನದ ಬಳಕೆ,ಸೃಜನಾತ್ಮಕ ಕರಕುಶಲತೆ,ಸಮುದಾಯದ ಸಹಭಾಗಿತ್ವ ಇವುಗಳು ಕಲಿಕಾ ಹಬ್ಬದ ಪ್ರಮುಖ ಚಟುವಟಿಕಾಂಶವಾಗಿವೆ ಎಂದು ವಿವರಿಸಿದರು.
ಇದನ್ನು ಓದು: ಹಾಸನ : ವಿವಿಧ ಕಸುಬುದಾರರ ಕಾರ್ಮಿಕರ ಸಂಘದ ಹಾಸನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿ ಸುನೀತಾ ಮಂಜುನಾಥ್ ನೇಮಕ
ಬಸವಾಘಟ್ಟ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಯ ವಿದ್ಯಾರ್ಥಿಗಳು ನಿಯಮಿಸಿದ ಎಲ್ಲ ಸಾಮರ್ಥ್ಯಗಳನ್ನು ಸಂತಸದಿಂದ ಪ್ರದರ್ಶಿಸಿದರು.
ವೇದಿಕೆಯಲ್ಲಿ ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್, ಪಿ ಡಿ ಓ ಪ್ರಭಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸ್ವಾಮೀಗೌಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹೆಚ್ ಎಸ್ ಜಗದೀಶ್, ಶಿಕ್ಷಕರಾದ ರವೀಶ್, ವಿಮಲಾ, ಹಾಗೂ ಕ್ಲಸ್ಟರ್ ವ್ಯಾಪ್ತಿಯ ಎಲ್ಲ ಶಾಲೆಗಳ ಶಿಕ್ಷಕರು ಹಾಗೂ ನೆರೆ ಹೊರೆ ಕ್ಲಸ್ಟರ್ ನ ಸಿ ಆರ್ ಪಿ ಯವರು ಭಾಗವಹಿಸಿದ್ದರು.
