ಹಾಸನ: ಕಂಕಣ ಸಿಲ್ಕ್ ಸಂಸ್ಥೆಯ ವತಿಯಿಂದ ನಗರದಹೋಟೆಲ್ ಅಶೋಕನಲ್ಲಿ ಮಾರ್ಚ್ 13, 14 ಮತ್ತು 15 ರಂದು ಸೀರೆಗಳ ವಿಶೇಷ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸಲಾಗಿದೆ ಎಂದು ರಶ್ಮಿ ಅವರು ತಿಳಿಸಿದರು.
ಪ್ರದರ್ಶನದಲ್ಲಿ ವಿವಿಧ ರೀತಿಯ ಸೀರೆಗಳು ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಕಾಂಚಿಪುರಂ ಸಿಲ್ಕ್, ಮೈಸೂರು ಸಿಲ್ಕ್, ಬನಾರಸ್ ಸಿಲ್ಕ್, ಮಾಡಲ್ ಸಿಲ್ಕ್, ಲೆನಿನ್ ಹಾಗೂ ಕಾಟನ್ ಸೀರೆಗಳು ಸೇರಿದಂತೆ ವಿವಿಧ ವಿನ್ಯಾಸಗಳ ಸೀರೆಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ ಎಂದು ಹೇಳಿದರು.
ಮಹಿಳೆಯರು ಹಾಗೂ ಮಹಿಳಾ ನೌಕರಿಯರು ತಮ್ಮ ಇಷ್ಟದ ಸೀರೆಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಅವಕಾಶವನ್ನು ಈ ಕಾರ್ಯಕ್ರಮ ಒದಗಿಸುತ್ತದೆ ಎಂದು ತಿಳಿಸಿದರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ತೌಫೀಕ್ ಅಹಮದ್ ಉಪಸ್ಥಿತರಿದ್ದರು.
