ಹಾಸನ – ಜಿಲ್ಲೆಯಲ್ಲಿ ಮೆಕ್ಕೆಜೋಳ ನಾಶ: ಬಿಳಿಸುಳಿ ರೋಗದ ಅಧ್ಯಯನಕ್ಕೆ ತಂಡ ಕಳಿಸಲು ರೇವಣ್ಣ ಒತ್ತಾಯ

ಹಾಸನ ಜಿಲ್ಲೆಯಲ್ಲಿ ಬಿಳಿಸುಳಿ ರೋಗದಿಂದ ಮೆಕ್ಕೆಜೋಳ ಬೆಳೆ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಸರ್ಕಾರಕ್ಕೆ 4 ವಿಜ್ಞಾನಿ ತಂಡಗಳನ್ನು ಜಿಲ್ಲೆಗೆ ಕಳಿಸಬೇಕು ಎಂಬ ಆಗ್ರಹವನ್ನು ವ್ಯಕ್ತಪಡಿಸಿದ್ದಾರೆ.