ಹಾಸನ: ಹಾಸನ ಜಿಲ್ಲಾ ವಕೀಲರ ಸಂಘ, ಹಾಸನ ಜಿಲ್ಲಾ ಆರೋಗ್ಯ, ಕುಟುಂಬ ಮತ್ತು ಕಲ್ಯಾಣ ಅಧಿಕಾರಿಗಳ ಕಚೇರಿ, ರೋಟರಿ ಕ್ಲಬ್ ಹಾಸನ್ ಮಿಡ್ ಟೌನ್, ರೋಟರಿ ಕ್ಲಬ್ ಆಫ್ ಸನ್ ರೈಸ್, ವಿ ಕೇರ್ ಡೆಂಟಲ್ ಕ್ಲಿನಿಕ್ ಹಾಗೂ ಸುನಂದ ಕಣ್ಣಿನ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಾಸನ ನಗರದಲ್ಲಿ ವಕೀಲರು ಮತ್ತು ಅವರ ಕುಟುಂಬದವರಿಗೆ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.
ಶಿಬಿರದಲ್ಲಿ 250 ಕ್ಕೂ ಹೆಚ್ಚು ವಕೀಲರು ಮತ್ತು ಅವರ ಕುಟುಂಬಸ್ಥರಿಗೆ ಮಧುಮೇಹ, ರಕ್ತದ ಒತ್ತಡ, ಕಣ್ಣು, ದಂತ, ಮೂಳೆ-ಕೀಲು ಹಾಗೂ ಸ್ತ್ರೀರೋಗ ತಪಾಸಣೆಗಳು ಮಾಡಲಾಯಿತು. ವಕೀಲರ ಸಂಘದ ಅಧ್ಯಕ್ಷ ಕಾರ್ಲೆ ಮೋಗಣ್ಣಗೌಡರು ವಕೀಲರು ತಮ್ಮ ಆರೋಗ್ಯದ ಮೇಲೂ ಗಮನ ಹರಿಸಬೇಕೆಂದು ತಿಳಿಸಿದರು.

ಡಾಕ್ಟರ್ ತೇಜಸ್ವಿ ಅವರು ನಿಯಮಿತ ವೈದ್ಯಕೀಯ ಪರಿಶೀಲನೆ, ಸರಿಯಾದ ಆಹಾರ, ವ್ಯಾಯಾಮ, ಯೋಗಾಸನ ಮತ್ತು ಸಮರ್ಪಕ ನಿದ್ರೆ ಆರೋಗ್ಯ ಕಾಯ್ದುಕೊಳ್ಳಲು ಅಗತ್ಯವಿರುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಹಾಸನ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು, ರೋಟರಿ ಕ್ಲಬ್ ಹಾಸನ್ ಮಿಡ್ ಟೌನ್ ಮತ್ತು ಸನ್ ರೈಸ್ನ ಸದಸ್ಯರು ಉಪಸ್ಥಿತರಿದ್ದರು.

ಶಿಬಿರವು ವಕೀಲರ ಆರೋಗ್ಯ ಕುರಿತು ಅರಿವು ಮೂಡಿಸುವ ಮತ್ತು ಸಮಗ್ರ ಚಿಕಿತ್ಸೆಯ ಅವಕಾಶ ಕಲ್ಪಿಸುವ ಪ್ರಮುಖ ಕಾರ್ಯಕ್ರಮವಾಗಿ ಗಮನಸೆಳೆದಿತು.
